ADVERTISEMENT

67 ಜನರಿಗೆ ಕೋವಿಡ್‌ ದೃಢ

2,119ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:20 IST
Last Updated 28 ಜುಲೈ 2020, 16:20 IST
ಯಾದಗಿರಿ ಹೊರ ವಲಯದ ಕೋವಿಡ್‌ ಆಸ್ಪತ್ರೆ
ಯಾದಗಿರಿ ಹೊರ ವಲಯದ ಕೋವಿಡ್‌ ಆಸ್ಪತ್ರೆ   

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ 67 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಜುಲೈ 28ರವರೆಗೆ 2,119 ವರದಿ ಪಾಸಿಟಿವ್ ಬಂದಿವೆ. ಮಂಗಳವಾರದ 285 ನೆಗೆಟಿವ್ ವರದಿ ಸೇರಿ ಈವರೆಗೆ 31,546 ಮಾದರಿಗಳ ವರದಿ ನೆಗೆಟಿವ್ ಬಂದಿವೆ.

ಯಾದಗಿರಿ ನಗರದಲ್ಲಿ 24, ಗ್ರಾಮಾಂತರದಲ್ಲಿ 13, ಶಹಾಪುರ ನಗರದಲ್ಲಿ 1, ಗ್ರಾಮಾಂತರದಲ್ಲಿ 10, ಸುರಪುರ ನಗರದಲ್ಲಿ 12, ಗ್ರಾಮೀಣದಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ. 9 ಜನ ಸೋಂಕಿತರು ಐಎಲ್‌ಐ ಹಿನ್ನೆಲೆ ಹೊಂದಿದ್ದಾರೆ. ಹಲವಾರು ಸೋಂಕಿತರ ಸಂಪರ್ಕ ಹಿನ್ನೆಲೆ ಪತ್ತೆ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,882 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,632 ಜನರನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 176 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದ್ದು, ಇದರಲ್ಲಿ 71 ಕಂಟೇನ್‍ಮೆಂಟ್ ಝೋನ್‍ಗಳನ್ನು ತೆರವುಗೊಳಿಸಲಾಗಿದೆ.ಹೊಸ ಜಿಲ್ಲಾಸ್ಪತ್ರೆ,ಶಹಾಪುರ, ಸುರಪುರ, ಬಂದಳ್ಳಿ ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 510 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ADVERTISEMENT

ಕೋವಿಡ್‌ ಅಂಕಿ ಅಂಶ

ಒಟ್ಟು ಸೋಂಕಿತರು; 2,119

ಮಂಗಳವಾರ ದೃಢಪಟ್ಟ ಪ್ರಕರಣಗಳು;67

ಮಂಗಳವಾರ ಗುಣಮುಖರಾದವರು;16

ಒಟ್ಟು ಗುಮುಖರಾದವರು;1,609

ಸಕ್ರಿಯ ಪ್ರಕರಣಗಳು;508

ಮಾದರಿಗಳ ವರದಿ ಬಾಕಿ:185

ಒಟ್ಟು ಮೃತಪಟ್ಟವರು;2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.