ADVERTISEMENT

ಸುರಪುರ: ಕೃಷಿ ಕೂಲಿಕಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:53 IST
Last Updated 29 ಸೆಪ್ಟೆಂಬರ್ 2020, 15:53 IST
ಸುರಪುರದಲ್ಲಿ ಮಂಗಳವಾರ ಕೃಷಿ ಕೂಲಿಕಾರರ ಸಂಘ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ದವಲಸಾಬ ನದಾಫ ಮಾತನಾಡಿದರು
ಸುರಪುರದಲ್ಲಿ ಮಂಗಳವಾರ ಕೃಷಿ ಕೂಲಿಕಾರರ ಸಂಘ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ದವಲಸಾಬ ನದಾಫ ಮಾತನಾಡಿದರು   

ಸುರಪುರ: ನರೇಗಾ ಯೋಜನೆಯಡಿ ಕೆಲಸ ನೀಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೂಲಿಕಾರರು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದವಲಸಾಬ್‌ ನದಾಫ ಮಾತನಾಡಿ, ‘ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಕ್ಕಾಗಿ ಕೂಲಿಕಾರರು ಅರ್ಜಿ ಸಲ್ಲಿಸಿದರೂ ಉದ್ಯೋಗ ನೀಡುತ್ತಿಲ್ಲ. ಜಾಬಕಾರ್ಡ್ ನೀಡಿಲ್ಲ’ ಎಂದು ದೂರಿದರು.

‘ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಮಿಕರಿಗೆ ಕೂಲಿ ಪಾವತಿ ಮಾಡಿಲ್ಲ. ತಕ್ಷಣ ಹಣ ಪಾವತಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಬ್‌ಕಾರ್ಡ್ ನೀಡಿ ಕೆಲಸ ನೀಡಬೇಕು. ದಿನದ ಕೂಲಿ ₹ 600ಕ್ಕೆ ಹೆಚ್ಚಿಸಬೇಕು. ವರ್ಷಕ್ಕೆ 200 ದಿನ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಶ್ವನಾಥ ಅವರಿಗೆ ಮನವಿ ಸಲ್ಲಿಸಲಾಯಿತು. ಶರಣು ಅನ್ಸೂರ, ಹಣಮಂತ ಕಟ್ಟಿಮನಿ, ಯಲ್ಲಪ್ಪ ಚಿನ್ನಾಕಾರ, ಪ್ರಕಾಶ ಆಲ್ಹಾಳ, ದಾನಪ್ಪ ಕಡಿಮನಿ, ಆನಂದ ಲಕ್ಷ್ಮೀಪುರ, ರಾಜು ದೊಡ್ಮನಿ, ನಬಿರಸೂಲ ನದಾಫ, ಶರಣಪ್ಪ ಜಂಬಲದಿನ್ನಿ, ರಾಜಾಸಾಬ ನಾಗರಾಳ, ಜಟ್ಟೆಪ್ಪ, ರಂಜಾನಸಾಬ್‌ ನಾಗರಾಳ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.