ADVERTISEMENT

ಸುರಪುರ | ಅಂಬಾಭವಾನಿ ವರ್ಧಂತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:05 IST
Last Updated 30 ಏಪ್ರಿಲ್ 2025, 16:05 IST
ಸುರಪುರ ಸಮೀಪದ ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನ ವರ್ಧಂತಿ ಉತ್ಸವ ಅಂಗವಾಗಿ ಬುಧವಾರ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು
ಸುರಪುರ ಸಮೀಪದ ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನ ವರ್ಧಂತಿ ಉತ್ಸವ ಅಂಗವಾಗಿ ಬುಧವಾರ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು   

ಸುರಪುರ: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ರಂಗಂಪೇಟೆ-ತಿಮ್ಮಾಪುರದ ಅಂಬಾಭವಾನಿ ದೇವಸ್ಥಾನದ 55ನೇ ವರ್ಷದ ವರ್ಧಂತಿ ಉತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ದಾ ಭಕ್ತಿಯಿಂದ ಜರುಗಿದವು. ಮಂಗಳವಾರ ಸಂಜೆಯಿಂದಲೇ ಅಖಂಡ ಭಜನೆ ಸಂಗೀತ ಸೇವೆ ಮತ್ತು ಶರಣಪ್ಪ ಕಮ್ಮಾರ ಅವರಿಂದ ದಾಸವಾಣಿ ನಡೆಯಿತು.

ಬುಧವಾರ ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ದೇವಿಯ ಅಷ್ಟೋತ್ತರ ಪಾರಾಯಣ ನಡೆಯಿತು.

ADVERTISEMENT

ರಂಗಂಪೇಟೆಯ ಹನುಮಾನ ದೇವಸ್ಥಾನದಿಂದ ಅಂಬಾಭವಾನಿ ದೇವಸ್ಥಾನದವರೆಗೆ ಸುಮಂಗಲಿಯರಿಂದ ಪೂರ್ಣ ಕುಂಭ ಪಲ್ಲಕ್ಕಿ ಮೆರವಣಿಗೆ ನಡೆಯಿತು. ನಂತರ ಹೋಮ ಹವನ ಜರುಗಿತು. ಅಲಂಕಾರ ಪೂಜೆ, ಮಂಗಳಾರುತಿ, ತೀರ್ಥಪ್ರಸಾದ ವಿನಿಯೋಗವಾಯಿತು.

ಭಾವಸಾರ ಕ್ಷತ್ರಿಯ ಸಮಾಜದ ತಾಲ್ಲೂಕು ಅಧ್ಯಕ್ಷ ಅರುಣಕುಮಾರ ಪುಲ್ಸೆ, ಶಂಕರರಾವ ಮಹೇಂದ್ರಕರ್, ಭೂಮದೇವ ಮಹೇಂದ್ರಕರ್, ಏಳುಕೋಟೆಪ್ಪ ಪುಲ್ಸೆ, ರಾಜು ಪುಲ್ಸೆ, ಮೋಹನರಾವ ಮಾಳದಕರ್, ಶ್ರೀನಿವಾಸ ದಾಯಿಪುಲೆ, ಸುರೇಶ ಅಂಬೂರೆ, ನಾಗೇಶ ಅಂಬೂರೆ, ಮುರುಳಿ ಅಂಬೂರೆ, ಮಹಾಂತೇಶ ಶಹಾಪುರಕರ್, ಶರಣಬಸವ ಕೊಂಗಂಡಿ, ಮಹೇಶ ಗೋಗಿ, ಸೂಗಮ್ಮ ಕೊಂಗಂಡಿ, ಆನಂದ ಪರ್ತಾನಿ, ತಿರುಪತಿ ಹೂಗಾರ, ಕೃಷ್ಣ ಪತಂಗೆ, ಭೀಮಣ್ಣ ಪತಂಗೆ, ಗೋಪಾಲ ಮಾಳದಕರ್, ಪವನ ವಿಭೂತೆ, ದತ್ತು ಪುಲ್ಸೆ, ಲಲಿತ ಭಂಡಾರೆ, ಮುರುಳಿ ಅಂಬೂರೆ, ಮಧುಕರ ಮಾಳದಕರ್, ಓಂಪ್ರಕಾಶ ಪಾಡಮುಖಿ, ರಾಜು ಟೇಲರ್, ಅಂಬಾದಾಸ ಅಂಬೂರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.