ADVERTISEMENT

ಸಂವಿಧಾನದಿಂದ ಅಸಮಾನತೆ ದೂರ: ಶಾಸಕ ಶರಣಬಸಪ್ಪ ದರ್ಶನಾಪುರ

ಮದ್ರಿಕಿ: ದಸಂಸ ಸಹಯೋಗದಲ್ಲಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 17 ಮೇ 2022, 3:54 IST
Last Updated 17 ಮೇ 2022, 3:54 IST
ಶಹಾಪುರ ತಾಲ್ಲೂಕಿನ ಮದ್ರಿಕಿ ಗ್ರಾಮದಲ್ಲಿ ಸೋಮವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಶಹಾಪುರ ತಾಲ್ಲೂಕಿನ ಮದ್ರಿಕಿ ಗ್ರಾಮದಲ್ಲಿ ಸೋಮವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಮದ್ರಿಕಿ(ಶಹಾಪುರ): ಸಮಾನತೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರು ಶ್ರಮಿಸಿದ ಹಾದಿಯಲ್ಲಿ ಸಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣವು ಮನುಕುಲವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲೂಕಿನ ಮದ್ರಿಕಿ ಗ್ರಾಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಹಾಗೂ ಪ್ರಬುದ್ಧ ಬುದ್ಧ ವಿಹಾರ ಸಮಿತಿ ಸಹಯೋಗದಲ್ಲಿ ನಡೆದ 16 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸಮಾನತೆಯಿಂದ ಬಳಲು ತ್ತಿದ್ದ ಈ ದೇಶಕ್ಕೆ ಬಾಬಾಸಾಹೇಬರ ಸಂವಿಧಾನ ಜಾರಿಯಾಗಿದ್ದರಿಂದ ಇಂದು ಅಲ್ಪ ಪ್ರಮಾಣದಲ್ಲಿ ಅಸಮಾನತೆ ದೂರವಾಗಿದೆ ಎಂದರು.

ADVERTISEMENT

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬಕ್ಕೆ ಸರಳ ಸಾಮೂಹಿಕಗಳು ಆಸರೆಯಾಗಿ ನವ ದಂಪತಿಯ ಜೀವನಕ್ಕೆ ಹೊಸ ದಾರಿ ರೂಪಿಸುತ್ತವೆ ಎಂದು ಹೇಳಿದರು.

ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಮಾತನಾಡಿ, ಮದುವೆ ಮಾಡಲು ಬಡವರು ಜಮೀನು, ಆಸ್ತಿ ಮಾರಾಟ ಮಾಡಿ, ಸಾಲದ ಸೂಲಕ್ಕೆ ಸಿಲುಕುತ್ತಾರೆ. ಅಂತಹ ಸಾಲದ ಸುಳಿಗೆ ಕುಟುಂಬ ಸಿಲುಕಬಾರದು. ಸರಳ ವಿವಾಹ ಅತ್ಯಂತ ಶ್ರೇಷ್ಠ ಎಂದರು.

ಭಂತೆ ಧಮ್ಮಾನಂದ, ಆದಿತ್ಯ, ಬೋಧಿನಂದ, ಸಾರಿಪುತ್ರರು ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಅಶೋಕಗೌಡ ಮಾಲಿಪಾಟೀಲ, ನಾಗಣ್ಣ ಬಡಿಗೇರ, ಮರೆಪ್ಪ ಪ್ಯಾಟಿ ಶಿರವಾಳ, ನೀಲಕಂಠ ಬಡಿಗೇರ, ಶಿವಕುಮಾರ ತಳವಾರ, ಶ್ರೀಶೈಲ ಹೊಸ್ಮನಿ, ಶಂಕರ ಸಿಂಘೆ, ರಾಮಣ್ಣ ಕಲ್ಲದೇವನಹಳ್ಳಿ, ಶರಣಪ್ಪ ಕೊಂಬಿನ್, ರಾಯಪ್ಪ ಗಂಗನಾಳ, ಮಲ್ಲಣ್ಣ ಉಳ್ಳಂಡಗೇರಿ, ಶರಣಬಸವ ಬಿರೆದಾರ್, ಬಾಬುರಾವ್ ಬೂತಳಿ, ಭೀಮರಾಯ ಜುನ್ನಾ, ಚಂದ್ರಕಾಂತ ರಸ್ತಾಪುರ, ಶರಣಪ್ಪ ಭೂತಳಿ, ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.