ADVERTISEMENT

ಶಿಕ್ಷಣದಿಂದ ಮಾತ್ರ ಪರಿವರ್ತನೆ ಸಾಧ್ಯ: ಶರಣಬಸಪ್ಪಗೌಡ ದರ್ಶನಾಪುರ

ಕೆಂಭಾವಿ: ಬುದ್ಧವಿಹಾರ ಸಾಂಚಿ ಮಹಾದ್ವಾರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:06 IST
Last Updated 3 ಮೇ 2022, 5:06 IST
ಕೆಂಭಾವಿಯ ಬುದ್ಧ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಆನಂದ ಬುದ್ಧವಿಹಾರ ಸಾಂಚಿ ಮಹಾದ್ವಾರ ಉದ್ಘಾಟನೆ , ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು
ಕೆಂಭಾವಿಯ ಬುದ್ಧ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಆನಂದ ಬುದ್ಧವಿಹಾರ ಸಾಂಚಿ ಮಹಾದ್ವಾರ ಉದ್ಘಾಟನೆ , ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು   

ಕೆಂಭಾವಿ: ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ಬುದ್ಧ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ, ಆನಂದ ಬುದ್ಧವಿಹಾರ ಸಾಂಚಿ ಮಹಾದ್ವಾರ ಉದ್ಘಾಟನೆ ಹಾಗೂ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ರಚಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಅನೇಕ ಜಾತಿ, ಧರ್ಮ, ಪಂಥಗಳಿವೆ. ಅವುಗಳನ್ನು ಒಳಗೊಂಡಂತೆ ರಚಿಸುವುದು ಕಷ್ಟ ಸಾಧ್ಯವಾಗಿತ್ತು. ಅಂತಹದನ್ನು ಎಲ್ಲ ಜನರಿಗೆ ಸುಲಭವಾಗಿ ತಲುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ADVERTISEMENT

ಸಾರಿಪುತ್ರ ಬುದ್ಧವಿಹಾರ ಶಹಾಪುರದ ಭಂತೆ ಆದಿತ್ಯ ಮಾತನಾಡಿ, ಪ್ರತಿಯೊಬ್ಬರೂ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸಿ ಸಂವಿಧಾನದ ಆಶಯಗಳಂತೆ ನಡೆದರೆ ದೇಶ ಸುಭಿಕ್ಷೆಯಾಗುವುದರಲ್ಲಿ ಸಂಶಯವಿಲ್ಲ. ಜನಬಲ, ಧನಬಲದಿಂದ ಆಗಲಾರದ್ದನ್ನು ಪಾಂಡಿತ್ಯ ಬಲದಿಂದ ಸಾಧಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅತಿ ಹೆಚ್ಚು ಪದವಿ ಪಡೆದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದರು.

ಆನಂದ ಬುದ್ಧವಿಹಾರದ ಅಧ್ಯಕ್ಷ ಲಾಲಾಪ್ಪ ಹೊಸಮನಿ ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಮಡಿವಾಳಪ್ಪ ಕಟ್ಟಿಮನಿ, ಮಾನಪ್ಪ ಬಡಿಗೇರ, ಶಿವಶರಣಪ್ಪ ವಾಡಿ, ನಿಂಗನಗೌಡ ಮಾಲಿ ಪಾಟೀಲ, ಸಿದ್ದನಗೌಡ ಪೊಲೀಸ್ ಪಾಟೀಲ, ಬಸನಗೌಡ ಹೊಸಮನಿ ಯಾಳಗಿ, ವಾಮನರಾವ ದೇಶಪಾಂಡೆ, ಶರಣಬಸವ ಡಿಗ್ಗಾವಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ಗಜಾನಂದ ಬಿರಾದಾರ, ಶ್ರೀಶೈಲ್, ಬಸವರಾಜ ಮಲ್ಲೆ, ಡಾ.ಕಿರಣ ಜಕರಡ್ಡಿ, ಮಹಿಪಾಲರೆಡ್ಡಿ ಡಿಗ್ಗಾವಿ, ಮಲ್ಲಪ್ಪ ಇಂಗಳಗಿ, ಶರಣಪ್ಪ ಗಾಯಕವಾಡ, ಬಸವರಾಜ ಬಸರಿಗಿಡ, ಶಿವಶರಣ ಯಾಳಗಿ, ಮರೆಪ್ಪ ಕಟ್ಟಿಮನಿ, ಬಸವಣ್ಣೆಪ್ಪ ಮಾಳಳ್ಳಿಕಾರ್, ಲಕ್ಷ್ಮಣ ಬಸರಿಗಿಡ, ಪುರಸಭೆ ಸದಸ್ಯರು ಇದ್ದರು.

ಇದೇ ವೇಳೆ ಅತಿಥಿಗಳಿಂದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಬೆಳಿಗ್ಗೆ ಅಂಬೇಡ್ಕರ್ ವೃತ್ತದಿಂದ ಆನಂದ ಬುದ್ಧವಿಹಾರದ ವರೆಗೆ ಡಾ.ಅಂಬೇಡ್ಕರ್ ಅವರ ಭವ್ಯ ಮೂರ್ತಿಯೊಂದಿಗೆ ಮುಖ್ಯರಸ್ತೆಗಳ ಮೇಲೆ ಮೆರವಣಿಗೆ ನಡೆಯಿತು.

ಆರ.ಎಸ್.ಮಾಲಗತ್ತಿ ನಿರೂಪಿಸಿ ಬಸವರಾಜ ಮಾಳಳ್ಳಿಕರ್ ಸ್ವಾಗತಿಸಿ ದರು. ರಾಯಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.