ADVERTISEMENT

ಅಂಬೇಡ್ಕರ್‌ ಪ್ರತಿಮೆ ಸ್ಫೂರ್ತಿ ಕೊಡಬಲ್ಲದು: ಜ್ಞಾನ ಪ್ರಕಾಶನ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:19 IST
Last Updated 6 ಮೇ 2025, 14:19 IST
6ಎಸ್ಎಚ್ಪಿ 2: ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೋಡ್ಲಾ ಉರಿಲಿಂಗ ಮಠದ ಜ್ಞಾನ ಪ್ರಕಾಶನ ಸ್ವಾಮೀಜಿ ಮಾತನಾಡಿದರು
6ಎಸ್ಎಚ್ಪಿ 2: ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೋಡ್ಲಾ ಉರಿಲಿಂಗ ಮಠದ ಜ್ಞಾನ ಪ್ರಕಾಶನ ಸ್ವಾಮೀಜಿ ಮಾತನಾಡಿದರು   

ಶಹಾಪುರ: ‘ಡಾ.ಅಂಬೇಡ್ಕರ್ ಅವರು ಪ್ರತಿಮೆಯಲ್ಲಿ ಇಲ್ಲ. ಆದರೆ ಪ್ರತಿಮೆ ಸ್ಫೂರ್ತಿ ಕೊಡಬಲ್ಲದು. ನಾವೆಲ್ಲ ಶೈಕ್ಷಣಿಕವಾಗಿ ಉನ್ನತಿ ಸಾಧಿಸಿದರೆ ಖುಷಿಯಾಗುತ್ತದೆ. ಡಿಜೆ ಸಪ್ಪಳದಲ್ಲಿ ಪಾನಮತ್ತರಾಗಿ ಜಯಂತ್ಯುತ್ಸವ ಆಚರಿಸುವುದು ಸರಿಯಲ್ಲ. ಪ್ರತಿ ಗುಡಿಸಲಿನಲ್ಲಿ ಅಕ್ಷರದ ಅರಿವಿನ ಬೆಳಕು ವಿಸ್ತರಿಸಬೇಕು’ ಎಂದು ಕೋಡ್ಲಾ ಉರಿಲಿಂಗ ಮಠದ ಜ್ಞಾನ ಪ್ರಕಾಶನ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ಬುದ್ದ, ಬಸವ, ಅಂಬೇಡ್ಕರ್ ಬೇರೆಯಲ್ಲ. ಮೂವರಲ್ಲಿ ಒಬ್ಬರನ್ನು ಅರ್ಥಮಾಡಿಕೊಂಡರೆ, ನಮ್ಮೊಳಗೆ ಎಲ್ಲರೂ ಸೇರಿಕೊಳ್ಳುತ್ತಾರೆ. ಮೂವರು ದಾರ್ಶನಿಕರ ವಿಚಾರಧಾರೆಯನ್ನು ಯುವ ಸಮುದಾಯಕ್ಕೆ ತಲುಪಿಸಬಾರದು ಎಂದು ಉದ್ದೇಶ ಹೊಂದಿರುವ ರಾಜಕಾರಣಿಗಳು ಮನುವಾದವನ್ನು ಮುನ್ನೆಲೆಗೆ ತರುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ವಕೀಲೆ ಅಶ್ವಿನಿ ಮದನಕರ, ಶಿವಯೋಗ ಸ್ವಾಮೀಜಿ, ಶಿವರಾಜಪ್ಪಗೌಡ ಪಾಟೀಲ, ಶಿವಕುಮಾರ, ಮಹೇಶಗೌಡ ಮಾಟೀಲ ಮುದ್ನಾಳ, ಶಿವಪುತ್ರ ಜವಳಿ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸಮನಿ, ಶಿವಕುಮಾರ ತಳವಾರ, ಹೊನ್ನಪ್ಪ ರಸ್ತಾಪುರ, ನಾಗಣ್ಣ ಬಡಿಗೇರ, ಸುಭಾಸ ತಳವಾರ, ರಾಯಪ್ಪ ಸಾಲಿಮನಿ, ಮಲ್ಲಿಕಾರ್ಜುನ ಹೊಸಮನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.