ಕೆಂಭಾವಿ: ಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ ಕೊಂಬಿನ್ ಆಗ್ರಹಿಸಿದ್ದಾರೆ.
ಈ ಕುರಿತು ಉಪ ತಹಶೀಲ್ದಾರ್ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಕೆಂಭಾವಿ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯು ತಾಲ್ಲೂಕಿನಲ್ಲಿಯೇ ಅತ್ಯಂತ ಹಳೆಯ ಠಾಣೆಯಾಗಿದ್ದು, ಇಲ್ಲಿ 45 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಠಾಣೆ ವ್ಯಾಪ್ತಿಗೆ 65-70 ಗ್ರಾಮಗಳ ಒಳಪಡಲಿದೆ.ಹಾಗಾಗಿ ಈ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಸತಿ ಗೃಹಗಳು ಇಲ್ಲ. ಹಾಗಾಗಿ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಕಟ್ಟಮನಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ, ಮಡಿವಾಳಪ್ಪ ಕಟ್ಟಿಮನಿ, ನಬಿರಸೂಲ ನದಾಫ್, ಶಿವಾನಂದ ದೇವರಮನಿ, ಹಣಮಂತ ಬೊಮ್ಮನಹಳ್ಳಿ, ಸಿದ್ದಾರ್ಥ ಮಾಳಳ್ಳಿಕರ್, ಸೂಗಪ್ಪ ನಗನೂರ, ಬಸವರಾಜ ಇಂಗಳಗಿ, ವಿಜಯಕುಮಾರ, ತಿಮ್ಮಣ್ಣ ಹೊಸಗೇರಿ, ರಮೇಶ ಬಡಿಗೇರ, ಮಂಜುನಾಥ ಜಲಪೂರ, ರವಿ ನಾಗರೆಡ್ಡಿ, ರಾಜು ನಾಗರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.