ಯಾದಗಿರಿ: ‘ಭಾರತ ದೇಶದ ಗ್ರಾಮೀಣ ಭಾಗಕ್ಕೆ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಸೇರಿದಂತೆ ಹಲವು ಅಭಿವೃದ್ಧಿಪರ ಯೋಜನೆಗಳಿಂದಾಗಿ ಮೂಲ ಸೌಕರ್ಯಗಳ ಸಿಕ್ಕವು. ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಅನನ್ಯವಾಗಿದೆ’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕರ್ಮದಲ್ಲಿ ಮಾತನಾಡಿದ ಅವರು, ದೆಹಲಿಯ ಮೆಟ್ರೋವ್ಯವಸ್ಥೆಗೆ ವ್ಯಾಪಕವಾದ ಕೆಲಸವನ್ನು ವಾಜಪೇಯಿ ನೇತೃತ್ವದ ಸರ್ಕಾರ ಮಾಡಿತ್ತು. ಅದು ಇಂದು ವಿಶ್ವದರ್ಜೆಯ ಯೋಜನೆಯಾಗಿ ಸೆಳೆಯುತ್ತಿದೆ ಎಂದರು.
ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ವಾಜಪೇಯಿ ಅವರು ಅದ್ಭುತ ವಾಗ್ಮಿಗಳಾಗಿದ್ದರು. ವಿರೋಧ ಪಕ್ಷಗಳಿಂದಲೂ ಅಪಾರವಾದ ಗೌರವ ಮತ್ತು ಮೆಚ್ಚಿಗೆಯನ್ನು ಪಡೆದ ಸಂಸದಿಯ ಪಟುವಾಗಿ, ಮುತ್ಸದ್ಧಿ ನಾಯಕರಾಗಿದ್ದರು. ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರವನ್ನು ಅಭಿವೃಧ್ಧಿಗೊಳಿಸಿದ ಕೀರ್ತಿ ಅವರದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಉಪಾಧ್ಯಕ್ಷ ಮಾರುತಿ ಕಲಾಲ್, ಮಲ್ಲಿಕಾರ್ಜುನ ಹೋನಿಗೇರಿ, ಸುನಿತಾ ಚವಾಣ, ಲಿಂಗಪ್ಪ ಹತ್ತಿಮನಿ, ಸ್ವಾಮಿದೇವ ದಾಸನಕೆರಿ, ಮಾಶೇಪ್ಪ ನಾಯಕ, ಗೋಪಾಲ ದಾಸನಕೇರಿ, ಶರಣುಗೌಡ ಅಲಿಪುರ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.