ADVERTISEMENT

ಯಾದಗಿರಿ। 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 15:58 IST
Last Updated 25 ಜನವರಿ 2023, 15:58 IST
ಯಾದಗಿರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಮೃದ್ಧಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ ನಡೆಯಿತು
ಯಾದಗಿರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಮೃದ್ಧಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ ನಡೆಯಿತು   

ಯಾದಗಿರಿ: ಗಣರಾಜ್ಯೋತ್ಸವದ ಅಂಗವಾಗಿ ಸಮೃದ್ಧಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜಕ್ಕೆ ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಚಾಲನೆ ನೀಡಿದರು.

74 ನೇ ಗಣರಾಜ್ಯೋತ್ಸವದ ಸವಿಸ್ಮೃತಿಯಲ್ಲಿ ಸೌಹಾರ್ದತೆಗಾಗಿ, ಯುವ ನಡಿಗೆ, ಸಾವಿರಾರು ಯುವಮನಸುಗಳೊಂದಿಗೆ ಬೃಹತ್ ರಾಷ್ಟ್ರಧ್ವಜದ ಮರವಣಿಗೆಯನ್ನು ಜೂನಿಯರ್ ಕಾಲೇಜಿನಿಂದ ಆರಂಭವಾದ ಬೃಹತ್‌ ಧ್ವಜಾರೋಹಣ ಕನಕ ವೃತ್ತ, ಅಂಬೇಡ್ಕರ್ ವೃತ್ತ, ಶಾಸ್ತ್ರೀ ವೃತ್ತ, ಸುಭಾಶಚಂದ್ರ ಬೋಸ್ ವೃತ್ತದ ಮೂಲಕ ಪದವಿ ಕಾಲೇಜು ತಲುಪಿತು. ದಾರಿಯುದ್ದುಕ್ಕೂ ಡೊಳ್ಳು, ಬಜಾ ಭಜಂತ್ರಿ, ದೇಶ ಭಕ್ತಿ ಗೀತೆಗಳ ಮೂಲಕ ಧ್ವಜಾರೋಹಣ ಹಿಡಿದು ಮುಂದೆ ಸಾಗಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಕಾಂಗ್ರೆಸ್‌ ಮುಖಂಡ ಡಾ. ಭೀಮಣ್ಣ ಮೇಟಿ, ಮಾಜಿ ನಗರಸಭೆ ಅಧ್ಯಕ್ಷ ಶಶಿಧರೆಡ್ಡಿ ಹೊಸಳ್ಳಿ, ರಾಯಲ್ ಮ್ಯಾನ್‌ ಏಜೆನ್ಸಿಯ ಮುಖಸ್ಥ ಅಭಿಷೇಕ ಆರ್‌ ದಾಸನಕೇರಿ, ಡಾ. ಪ್ರತಿಮಾ ಎಸ್. ಕಾಮರೆಡ್ಡಿ, ಮಂಜುಳಾ ಗೂಳಿ, ಮಲ್ಲಪ್ಪ ಕುಮಾರ, ರಾಜಕುಮಾರ ನಾಯಕ, ಸಮೃದ್ಧಿ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಾ ದಾಸನಕೇರಿ, ಹಣಮಂತ್ರಾಯ ಮಾಲಿಪಾಟೀಲ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.