ADVERTISEMENT

ವಿವಿಧೆಡೆ ಬೇಡ ಜಂಗಮ ಸಮಾಜದ ಪ್ರತಿಭಟನೆ

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ, ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:12 IST
Last Updated 7 ಜುಲೈ 2022, 4:12 IST
ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಹುಣಸಗಿ ಪಟ್ಟಣದಲ್ಲಿ ಸತ್ಯ ಪ್ರತಿಪಾದನಾ ಪ್ರತಿಭಟನೆ ನಡೆಯಿತು
ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಹುಣಸಗಿ ಪಟ್ಟಣದಲ್ಲಿ ಸತ್ಯ ಪ್ರತಿಪಾದನಾ ಪ್ರತಿಭಟನೆ ನಡೆಯಿತು   

ಹುಣಸಗಿ: ‘ಸಂವಿಧಾನಾತ್ಮಕವಾಗಿ ನಮಗೆ ಸಿಗಬೇಕಾಗಿರುವ ಹಕ್ಕು ಪಡೆದುಕೊಳ್ಳಲು ಬೇಡ ಜಂಗಮರು ಹೋರಾಟ ಮಾಡುವ ಸ್ಥಿತಿ ರಾಜ್ಯದಲ್ಲಿ ಬಂದಿರುವದು ಅತ್ಯಂತ ವಿಷಾದದ ಸಂಗತಿ’ ಎಂದು ಕೊಡೇಕಲ್ಲ ದುರದುಂಡೇಶ್ವರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಬೇಡ ಜಂಗಮ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸತ್ಯ ಪ್ರತಿಪಾದನಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

101 ಪರಿಶಿಷ್ಟರ ಪಟ್ಟಿಯಲ್ಲಿ ಬೇಡಜಂಗಮ ಹೆಸರು 19ನೇ ಸ್ಥಾನದಲ್ಲಿದೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಬೇಡಜಂಗಮ ಸಮುದಾಯದ ಅಭಿವೃದ್ಧಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾನದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ಬಲಶೆಟ್ಟಿಹಾಳ ವಿರಕ್ತಮಠದ ಸಿದ್ಧಲಿಂಗಯ್ಯ ಶಾಸ್ತ್ರಿಮಾತನಾಡಿದರು.

ಬಸವರಾಜಸ್ವಾಮಿ ಸ್ಥಾವರಮಠ, ಬೇಡಜಂಗಮ ಸಮಾಜದ ಜಿಲ್ಲಾಧ್ಯಕ್ಷ ನಾಗಯ್ಯ ದೇಸಾಯಿಗುರು, ರಾಜಕೀಯ ಹಿತಾಸಕ್ತಿಯಿಂದ ಬೇಡ ಜಂಗಮ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ವಿಳಂಬಮಾಡಲಾಗುತ್ತಿದೆ ಎಂದು ಅವರು
ಆರೋಪಿಸಿದರು.

ವಿರುಪಾಕ್ಷಯ್ಯ ನಾರಾಯಣಪುರ, ನೀಲಕಂಠಸ್ವಾಮಿ ಕೊಡೇಕಲ್ಲ, ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿದರು. ಬಳಿಕ ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರವನ್ನು ಹುಣಸಗಿ ತಹಶೀಲ್ದಾರ್ ಜಗದೀಶ ಚೌರ್ ಅವರಿಗೆ ನೀಡಲಾಯಿತು.

ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೂ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವವಣಿಗೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಗುಳಬಾಳದ ಮರಿ ಹುಚ್ಚೇಶ್ವರ ಸ್ವಾಮೀಜಿ, ದೇವಿಂದ್ರಸ್ವಾಮಿ ಅರಕೇರಾ, ಚನ್ನಯ್ಯಸ್ವಾಮಿ
ಹಿರೇಮಠ, ಬಿ.ಎಲ್. ಹಿರೇಮಠ, ಸೋಮಶೇಖರ ಸ್ಥಾವರಮಠ, ಕಿಡಿಗಣ್ಣಯ್ಯಸ್ವಾಮಿ, ಶಿವಲಿಂಗಸ್ವಾಮಿ ವಿರಕ್ತಮಠ, ಚನ್ನಮಲ್ಲಯ್ಯ ಯಡಹಳ್ಳಿ, ಮಹೇಶ ಸ್ಥಾವರಮಠ, ರವಿ ಪುರಾಣಿಕಮಠ, ಪ್ರಭು ದೇಸಾಯಿಗುರು, ಗುರು ನಂದಿಕೋಲ, ಗಂಗಯ್ಯಸ್ವಾಮಿ, ಮಹಾಂತೇಶ ಕುಪ್ಪಿ, ಆಮಯ್ಯ ರಾಜನಕೋಳೂರ, ಆದಯ್ಯ ಬನಹಟ್ಟಿ, ವಿನೋದ ಮಠ, ಬಸಯ್ಯ ಕಕ್ಕೇರಿ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

‘ಹೋರಾಟ ಹತ್ತಿಕ್ಕುವ ಹುನ್ನಾರ’

ಶಹಾಪುರ: ‘ಬೆಂಗಳೂರಿನಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ಹತ್ತಿಕ್ಕುತ್ತಿರುವ ಹುನ್ನಾರ ಮಾಡುತ್ತಿದೆ. ಪ್ರಮಾಣ ಪತ್ರ ಪಡೆಯುವುದು ಸಂವಿಧಾನ ಬದ್ಧ ಹಕ್ಕು’ ಎಂದು ಬೇಡ ಜಂಗಮ ಸಮಾಜದ ಮುಖಂಡರು ಆಗ್ರಹಿಸಿದರು.

ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠರ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಬುಧವಾರ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಮುಖಂಡರು ತಹಶೀಲ್ದಾರ್ ಮಧುರಾಜ ಕೂಡ್ಲಗಿ ಅವರಿಗೆ ಮನವಿ ಸಲ್ಲಿಸಿ
ಮಾತನಾಡಿದರು.

ಕೆಲ ರಾಜಕಾರಣಿಗಳು ಸಮುದಾಯಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡದಂತೆ ತಡೆ ಹಿಡಿದಿರುವುದು ಸರಿಯಲ್ಲ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಬೊಳಾರಿ, ಎಂ.ಪಿ.ಹಿರೇಮಠ ಆರೋಪಿಸಿದರು

ಸೋಮಶೇಖರಯ್ಯ ಸ್ವಾಮಿ ಹೇರೂರಮಠ, ರೇವಣಸಿದ್ದಯ್ಯ ಡೆಂಗಿಮಠ, ಶಿವುಕುಮಾರ ಆದೋನಿ, ಬಸಯ್ಯಸ್ವಾಮಿ ಮಠ, ಸಿದ್ದಯ್ಯಸ್ವಾಮಿ ಹಿರೇಮಠ ಹಳಿಪೇಟ, ಮಲ್ಲಯ್ಯಸ್ವಾಮಿ ಇಟಗಿ, ಶರಣು ಸಲದಾಪುರ, ರಾಚಯ್ಯಸ್ವಾಮಿ ವಡಗೇರಿ, ಬಸವರಾಜ ಹಿರೇಗೌಡ, ಸಿದ್ರಾಮಯ್ಯ ಹಿರೇಮಠ, ವಿಜಯಕುಮಾರ ಸ್ಥಾವರಮಠ, ರಾಜು ರುಮಾಲಮಠ, ಅಮರೇಶ ಹಿರೇಮಠ ಟೊಣ್ಣೂರ, ಗಂಗಾಧರ ಚಿಕ್ಕಮಠ, ಈರಯ್ಯಸ್ವಾಮಿ, ಶ್ರೀನಾಥ ಸ್ಥಾವರಮಠ, ವಿಶ್ವನಾಥ ಚಿಕ್ಕಮಠ ‌ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.