
ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬದ ಮುನ್ನ ದಿನವಾದ ಮಂಗಳವಾರ ಭೋಗಿ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ಮನೆಯ ಪ್ರವೇಶ ದ್ವಾರವನ್ನು ತೋರಣಗಳಿಂದ ಸಿಂಗಾರಿಸಿ, ಅಂಗಳದಲ್ಲಿ ರಂಗೋಲಿ ಹಾಕಲಾಗಿತ್ತು. ತುಳಸಿ ಪೂಜೆ ಸಲ್ಲಿಸಿದರು.
ಹಬ್ಬದ ಮುನ್ನಾದಿನ ಮೊರದಲ್ಲಿ ಅರಿಶಿನ ಕುಂಕಮ, ಕಾಡಿಗೆ, ಎಣ್ಣೆ, ವಿವಿಧ ತರಕಾರಿ, ಹಿಟ್ಟು, ಬೆಲ್ಲ ಇತರೆ ವಸ್ತುಗಳ ದಕ್ಷಿಣೆಯನ್ನಿಟ್ಟು ಮೊರದಲ್ಲಿ ಬಾಗಿನ ನೀಡಿದರು. ಬಳಿಕ ಅವೇ ಪದಾರ್ಥಗಳಿಂದ ತಯಾರಿಸಲಾದ ವಿವಿಧ ಖಾದ್ಯಗಳನ್ನು ಮನೆಯ ಸದಸ್ಯರೊಂದಿಗೆ ಸವಿದರು.
‘ಬಾಗಿನ ನೀಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ಹೆಚ್ಚಾಗುತ್ತದೆ. ಲಕ್ಷ್ಮಿ ರೂಪದಲ್ಲಿ ದೇವತೆಗಳು ಸಂತೃಪ್ತಿಯಾಗುತ್ತಾರೆ ಎಂಬ ಪ್ರತೀತಿ ಇದೆ. ಹೀಗಾಗಿ, ಬಾಗಿನ ಕೊಡುವವರ ಮತ್ತು ಪಡೆಯುವವರ ಮುತೈದೆತನ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ’ ಎಂದು ಕಮಲಾಬಾಯಿ ಕುಲಕರ್ಣಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.