ADVERTISEMENT

ಯಾದಗಿರಿ | ಸಿಇಟಿ: ಮೊದಲ ದಿನ ಸುಸೂತ್ರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:23 IST
Last Updated 16 ಏಪ್ರಿಲ್ 2025, 16:23 IST
ಯಾದಗಿರಿ ನಗರದ ಜ್ಯೂನಿಯರ್ ಕಾಲೇಜಿನ‌ ಆವರಣದಲ್ಲಿ ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಅಭ್ಯರ್ಥಿಗಳನ್ನು ಪರಿಶೀಲನೆ ಮಾಡಲಾಯಿತು
ಯಾದಗಿರಿ ನಗರದ ಜ್ಯೂನಿಯರ್ ಕಾಲೇಜಿನ‌ ಆವರಣದಲ್ಲಿ ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಅಭ್ಯರ್ಥಿಗಳನ್ನು ಪರಿಶೀಲನೆ ಮಾಡಲಾಯಿತು    

ಯಾದಗಿರಿ: ವೃತ್ತಿಪರ ಕೋರ್ಸ್ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪರೀಕ್ಷೆ ಬುಧವಾರ ಸುಗಮವಾಗಿ ನಡೆದಿದೆ.

ಏ.16ರಂದು ಭೌತ ವಿಜ್ಞಾನ (ಬೆಳಿಗ್ಗೆ 10.30ರಿಂದ 11.50) ಮತ್ತು ರಸಾಯನ ವಿಜ್ಞಾನ (ಮಧ್ಯಾಹ್ನ 2.30ರಿಂದ 3.50) ರವರೆಗೆ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಬೆಳಗಿನ ಪರೀಕ್ಷೆಗೆ 3,917 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. 3,740 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 177 ಗೈರಾಗಿದ್ದಾರೆ. ಮಧ್ಯಾಹ್ನ ನಡೆದ ಪರೀಕ್ಷೆಗೆ 3,917 ಅಭ್ಯರ್ಥಿಗಳಲ್ಲಿ 3,739 ಅಭ್ಯರ್ಥಿಗಳು ಹಾಜರಾಗಿದ್ದಾರೆ. 178 ಅಭ್ಯರ್ಥಿಗಳು ಗೈರಾಗಿದ್ದಾರೆ.

ADVERTISEMENT

ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಕುಲಂಕುಷವಾಗಿ ಅಭ್ಯರ್ಥಿಗಳನ್ನು ತಪಾಸಣೆ ಮಾಡಲಾಯಿತು. ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್ ಸಾಧನಗಳು, ಕೈಗಡಿಯಾರ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಏ.17ರಂದು ಗಣಿತ (ಬೆಳಿಗ್ಗೆ 10.30ರಿಂದ 11.50) ಮತ್ತು ಜೀವ ವಿಜ್ಞಾನ (ಮಧ್ಯಾಹ್ನ 2.30ರಿಂದ 3.50) ವಿಷಯಗಳ ಪರೀಕ್ಷೆಗಳು ನಡೆಯಲಿದೆ.

ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಕಿವಿಯಿಂದ ಬಂಗಾರದ ಓಲೆಯನ್ನು ತೆಗೆದು ತಾಯಿಗೆ ಕೊಡುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.