ADVERTISEMENT

ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ತಡೆಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 4:48 IST
Last Updated 14 ಆಗಸ್ಟ್ 2021, 4:48 IST
ಕೊಳ್ಳೂರ(ಎಂ): ಸೇತುವೆ ತಡೆಗೋಡೆ ಕುಸಿತ
ಕೊಳ್ಳೂರ(ಎಂ): ಸೇತುವೆ ತಡೆಗೋಡೆ ಕುಸಿತ   

ಶಹಾಪುರ: ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ಹೊಂದಿಕೊಂಡಿರುವ ತಡೆಗೋಡೆ ಕುಸಿತದಿದೆ. ಪ್ರವಾಹದ ನೀರಿನ ಸೆಳೆತ ಹಾಗೂ ಹೆಚ್ಚು ನೀರು ನಿಲುಗಡೆಯಿಂದ ಸುಮಾರು ಐದಾರು ಫೀಟಿನಷ್ಟು ಕಲ್ಲಿನಿಂದ ನಿರ್ಮಿಸಿದ ಗೋಡೆ ಕುಸಿತವಾಗಿ ಹಲವು ದಿನಗಳು ಆಗಿದ್ದರೂ, ಒಬ್ಬ ಅಧಿಕಾರಿ ಆಗಮಿಸಿ ಗಮನಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ.

ಅಲ್ಲದೆ ವರ್ತುಲ ಆಕಾರವಾಗಿ ನಿರ್ಮಿಸಿದ ಪ್ರದೇಶವು ಬಿರುಕು ಬಿಟ್ಟಿದೆ. ಇದರಿಂದ ಸೇತುವೆಗೆ ಧಕ್ಕೆಯಾಗಲಿದೆ. ಜು.10ರಿಂದ 12 ದಿನಗಳ ಕಾಲ ಸೇತುವೆ ಪ್ರವಾಹದಿಂದ ಮುಳುಗಿ ಹೋಗಿತ್ತು. ಇಂದಿಗೂ ತಡೆಗೋಡೆಯು ತಂಪಾಗಿದೆ. ಸೇತುವೆ ಮೇಲೆ ಹೆಚ್ಚಿನ ಭಾರದ ವಾಹನಗಳು ಓಡಾಟದಿಂದ ಇನ್ನಷ್ಟು ಕುಸಿಯುವ ಅಪಾಯವಿದೆ. ಅಲ್ಲದೆ ಸೇತುವೆ ಮೇಲೆ ತಗ್ಗು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಲಿದೆ. ತಕ್ಷಣ ಸೇತುವೆ ದುರಸ್ತಿಗೊಳಿಸಿ ಜನತೆಯ ಆತಂಕವನ್ನು ದೂರ ಮಾಡಬೇಕು ಎಂದು ಕೊಳ್ಳೂರ(ಎಂ) ಗ್ರಾಮದ ಮುಖಂಡ ಬಸಪ್ಪ ಬಂಗಿ ಹಾಗೂ ಶಿವರಡ್ಡಿ ಪಾಟೀಲ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT