ADVERTISEMENT

‘371(ಜೆ) ಜಾರಿಗೆ ತಂದಿದ್ದು ಕಾಂಗ್ರೆಸ್’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:14 IST
Last Updated 8 ಫೆಬ್ರುವರಿ 2023, 7:14 IST
ಹುಣಸಗಿ ತಾಲ್ಲೂಕಿನ ವಜ್ಜಲ್ ಗ್ರಾಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಹುಣಸಗಿ ತಾಲ್ಲೂಕಿನ ವಜ್ಜಲ್ ಗ್ರಾಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸಮ್ಮುಖದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು   

ಹುಣಸಗಿ: ‘ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವೇ 371(ಜೆ) ಜಾರಿಗೆ ತಂದಿದ್ದು’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ತಾಲ್ಲೂಕಿನ ವಜ್ಜಲ್ ಗ್ರಾಮದಲ್ಲಿ ನೂರಾರು ಜನ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

‘ಕಲ್ಯಾಣ ಕರ್ನಾಕಟ ಭಾಗದಿಂದ ಪ್ರತಿ ವರ್ಷ ಸಾವಿರಾರು ಜನ ಡಾಕ್ಟರ್, ಎಂಜಿನಿಯರ್‌ಗಳು ಹೊರಬರುತ್ತಿರುವದು ನಮ್ಮ ಸರ್ಕಾರ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ದೂರದೃಷ್ಟಿ. ನಾರಾಯಣಪುರ ಬಳಿ ಬಸವಸಾಗರ ನಿರ್ಮಿಸಿ ಆಹಾರ ಉತ್ಪಾದನೆಯಲ್ಲಿ ಎಲ್ಲರ ಏಳಿಗೆಗೆ ಕಾರಣವಾಗಿದೆ. ಫೆ.10ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೇವತಕಲ್ಲ ಗ್ರಾಮಕ್ಕೆ ಆಗಮಿಸುತ್ತಿದ್ದು ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ, ಮುಖಂಡ ಚಂದ್ರಶೇಖರ ದಂಡಿನ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ ಕುಪ್ಪಿ, ಮುಖಂಡರಾದ ಸಂಗನಗೌಡ ಪೊಲೀಸ ಪಾಟೀಲ, ಈಶ್ವರಪ್ಪ ಶ್ರೀಗಿರಿ, ರಾಜಾ ವೇಣಗೋಪಾಲನಾಯಕ, ಸಿದ್ದಣ್ಣ ಮಲಗಲದಿನ್ನಿ, ರಾಜಾ ಸಂತೋಷನಾಯಕ, ಮಲ್ಲನಗೌಡ ಬೋರಂಗುಂಡ, ಭೀಮರಾಯ ಮೂಲಿಮನಿ, ರವಿಚಂದ್ರ ಆಲ್ದಾಳ, ವೆಂಕಟೇಶ ಬೇಟೆಗಾರ, ಶರಣಗೌಡ ಪಾಟೀಲ, ಶಾಂತಗೌಡ ಪಾಟೀಲ, ವಿರುಪಾಕ್ಷಿ ಬಾಗೇವಾಡಿ, ಶ್ರೀಶೈಲ ದೇವತಕಲ್ಲ, ಮಲ್ಲಣ್ಣ ನಾಗರಾಳ, ನಿಂಗು ನಿಂಗದಳ್ಳಿ, ಉಸ್ಮಾನಸಾಬ ರೂಡಗಿ, ರುದ್ರಣ್ಣ ಮೇಟಿ, ಶರಣಗೌಡ ಪಾಟೀಲ, ತಾರನಾಥ ಚವ್ವಾಣ ಸೇರಿದಂತೆ ಮುಖಂಡರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.