ADVERTISEMENT

‘ಆತ್ಮಸ್ಥೈರ್ಯ ಜೊತೆಗಿದ್ದರೆ ಕೊರೊನಾ ಕಾಡದು‘

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:43 IST
Last Updated 16 ಜುಲೈ 2020, 17:43 IST
ಅನಿಲ ದೇಶಪಾಂಡೆ, ಕೋವಿಡ್‌ ಗೆದ್ದವರು
ಅನಿಲ ದೇಶಪಾಂಡೆ, ಕೋವಿಡ್‌ ಗೆದ್ದವರು   

ಯಾದಗಿರಿ: ಕೋವಿಡ್‌–19 ಬಗ್ಗೆ ಹೊರಗಡೆ ಇರುವ ಸ್ಥಿತಿಗೂ ಆಸ್ಪತ್ರೆಯಲ್ಲಿರುವ ವಾಸ್ತವಿಕ ಪರಿಸ್ಥಿತಿಗೂ ತುಂಬಾ ಭಿನ್ನತೆಯಿದೆ. ಕೋವಿಡ್ ಸೋಂಕಿನ‌ ಕುರಿತ ಅರಿವಿಗಿಂತ ಭಯ ಹೆಚ್ಚಿದೆ. ಇದರಿಂದ ಆತಂಕ ಸಹಜ. ಆದರೆ, ಆತ್ಮಸ್ಥೈರ್ಯ ಜೊತೆಗಿದ್ದರೆ ಕೊರೊನಾ ನಮಗೇನೂ ಮಾಡಲ್ಲ. ಮೊದಲು ಭಯ ಮುಕ್ತರಾಗಬೇಕು.

ಆಸ್ಪತ್ರೆಯಲ್ಲಿ ಇರುವಾಗ ಬೆಳಿಗ್ಗೆ ಮತ್ತು ಸಂಜೆ ವೇಳೆ ಯೋಗ, ಧ್ಯಾನ ಮಾಡುತ್ತಿದ್ದೆ. ಇದು ಮೊದಲಿಂದ ಅಭ್ಯಾಸ ಇರುವುದರಿಂದ ಸಹಜವಾಗಿ ಮಾಡುತ್ತಿದ್ದೇನೆ. ಮನೆಯಲ್ಲಿ ವಾಸವಿಲ್ಲ ಎಂಬುದು ಹೊರತುಪಡಿಸಿದರೆ ಸಹಜವಾಗಿಯೇ ಇದ್ದೆ. ಕೋವಿಡ್‌ ಬಂತೆಂದು ಭಯ ಬೀಳುವುದು ಬೇಡ. ಅದೊಂದು ಸೋಂಕು ಅಷ್ಟೆ. ನಮ್ಮ ಧೈರ್ಯವೇ ನಮ್ಮನ್ನು ಸೋಂಕಿನ ವಿರುದ್ಧ ಪುಟಿದೇಳುವಂತೆ ಮಾಡುತ್ತದೆ.

ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಮಾಸ್ಕ್‌ ಧರಿಸಿ, ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಿ. ಆಗಾಗ್ಗೆ ಬಿಸಿ ನೀರು ಸೇವಿಸಿ. ಮನೆ ಮದ್ದು ಬಳಸಿ. ಭಯಪಡುವುದು ಬೇಡ. ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಗಮನ ಹರಿಸಬೇಕು.

ADVERTISEMENT

ಅನಿಲ ದೇಶಪಾಂಡೆ, ಕೋವಿಡ್‌ ಗೆದ್ದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.