ADVERTISEMENT

13 ದಿನದಲ್ಲಿ 111 ಪ್ರಕರಣಗಳು ದೃಢ

ಬೆಳಿಗ್ಗೆ 6, ಸಂಜೆ 18 ಪ್ರಕರಣಗಳು ಪತ್ತೆ, 111ಕ್ಕೆ ಏರಿಕೆಯಾದ ಸೋಂಕಿತರು

ಬಿ.ಜಿ.ಪ್ರವೀಣಕುಮಾರ
Published 24 ಮೇ 2020, 16:37 IST
Last Updated 24 ಮೇ 2020, 16:37 IST
ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ಮೇಲೆ ಭಾನುವಾರ ವಾಹನಗಳ ಸಂಚಾರ ಇಲ್ಲದೆ ಹೆದ್ದಾರಿ ಬಿಕೋ ಎನ್ನುತ್ತಿತ್ತು
ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ಮೇಲೆ ಭಾನುವಾರ ವಾಹನಗಳ ಸಂಚಾರ ಇಲ್ಲದೆ ಹೆದ್ದಾರಿ ಬಿಕೋ ಎನ್ನುತ್ತಿತ್ತು   

ಯಾದಗಿರಿ: ಜಿಲ್ಲೆಯಲ್ಲಿ ಮೇ 12ರಂದು ಮೊದಲ ಬಾರಿಗೆ ಪತ್ತೆಯಾದ ಕೋವಿಡ್‌–19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಭಾನುವಾರ 24 ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಮೇ 12ರಂದು 2, ಮೇ 17ರಂದು 3, ಮೇ 18ರಂದು6, ಮೇ 19ರಂದು 1, ಮೇ 20ರಂದು 1, ಮೇ 22ರಂದು 2, ಮೇ 23ರಂದು 72, ಮೇ 24ರಂದು 24 ಪ್ರಕರಣಗಳು ಪತ್ತೆಯಾಗಿವೆ.

ಭಾನುವಾರ ಮಧ್ಯಾಹ್ನದವರೆಗೆ 4 ವರ್ಷದ ಬಾಲಕಿ ಮತ್ತು 8 ವರ್ಷದಬಾಲಕಸೇರಿದಂತೆ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. 1 ವರ್ಷದ ಬಾಲಕಿ ಸೇರಿದಂತೆ 71 ಮಹಿಳೆ ಸೇರಿ ಸಂಜೆ ವೇಳೆಗೆ 18 ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

ಸುರಪುರ ತಾಲ್ಲೂಕಿನ ದಿವಲಗುಡ್ಡದ 27 ವರ್ಷದ ಮಹಿಳೆ ( ಪಿ-1976), ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ 8 ವರ್ಷದ ಬಾಲಕಿ (ಪಿ-1974), ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ 25 ವರ್ಷದ ಮಹಿಳೆ (ಪಿ-1975), ಸುರಪುರ ತಾಲ್ಲೂಕಿನ ದಿವಲಗುಡ್ಡದ 4 ವರ್ಷದ ಬಾಲಕಿ (ಪಿ-1972), ಯಾದಗಿರಿ ತಾಲ್ಲೂಕಿನ ಅಲ್ಲಿಪುರ ತಾಂಡಾದ 17 ವರ್ಷದ ಯುವತಿ (ಪಿ-1973), ಅಲ್ಲಿಪುರ ತಾಂಡಾದ 22 ವರ್ಷದ ಪುರುಷ (ಪಿ-2010) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 22 ವರ್ಷದ ಮಹಿಳೆ (ಪಿ-2070), ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ 25 ವರ್ಷದ ಮಹಿಳೆ (ಪಿ-2071), ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದ 21 ವರ್ಷದ ಮಹಿಳೆ (ಪಿ-2072), ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದ 21 ವರ್ಷದ ಮಹಿಳೆ (ಪಿ-2073), ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದ 70 ವರ್ಷದ ಮಹಿಳೆ (ಪಿ-2074), ಶಹಾಪುರ ತಾಲ್ಲೂಕಿನ ಕನ್ಯೆಕೊಳೂರು ತಾಂಡಾದ 37 ವರ್ಷದ ಮಹಿಳೆ (ಪಿ-2075), ಕನ್ಯೆಕೊಳೂರು ತಾಂಡಾದ 21 ವರ್ಷದ ಮಹಿಳೆ (ಪಿ-2076), ಯಾದಗಿರಿ ತಾಲ್ಲೂಕಿನ ಅಲ್ಲಿಪುರ ತಾಂಡಾದ 18 ವರ್ಷದ ಯುವತಿ (ಪಿ-2077), ಅಲ್ಲಿಪುರ ತಾಂಡಾದ 31 ವರ್ಷದ ಪುರುಷ (ಪಿ-2078), ಅಲ್ಲಿಪುರ ತಾಂಡಾದ 3 ವರ್ಷದ ಬಾಲಕಿಗೆ (ಪಿ-2079) ಸೋಂಕು ತಗುಲಿರುವುದು ಪತ್ತೆಯಾಗಿದೆ.

ಯಾದಗಿರಿ ತಾಲ್ಲೂಕಿನ ಗಡ್ಡೆಸೂಗೂರು ಗ್ರಾಮದ 14 ವರ್ಷದ ಬಾಲಕ (ಪಿ-2080), ಯಾದಗಿರಿ ತಾಲ್ಲೂಕಿನ ಅರಕೇರಾ (ಬಿ) ತಾಂಡಾದ 9 ವರ್ಷದ ಬಾಲಕಿ (ಪಿ-2081), ಶಹಾಪುರ ತಾಲ್ಲೂಕಿನ ಹಳಿಸಗರದ 26 ವರ್ಷದ ಪುರುಷ (ಪಿ-2082), ಹಳಿಸಗರದ 61 ವರ್ಷದ ಮಹಿಳೆ (ಪಿ-2083), ಹಳಿಸಗರದ 1 ವರ್ಷದ ಬಾಲಕಿ (ಪಿ-2084), ಯಾದಗಿರಿ ತಾಲ್ಲೂಕಿನ ಬಾಚವಾರ ತಾಂಡಾದ 31 ವರ್ಷದ ಪುರುಷ (ಪಿ-2085), ಬಾಚವಾರ ತಾಂಡಾದ 21 ವರ್ಷದ ಪುರುಷ (ಪಿ-2086), ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾಮದ 25 ವರ್ಷದ ಪುರುಷ (ಪಿ-2089) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಇವರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಸೋಲಾಪುರ, ಧೋಬಿಘಾಟ್, ಪುಣೆ ಶಿವಾಜಿನಗರ, ಮುಂಬೈಗಳಿಂದ ಜಿಲ್ಲೆಗೆ ಮೇ 12ರಂದು ಆಗಮಿಸಿದ್ದರು. ಪಿ-2070 ಪ್ರಕರಣದ ವ್ಯಕ್ತಿಯನ್ನು ಜಿಲ್ಲೆಯ ಲಿಂಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮತ್ತು ಪಿ-2071, ಪಿ-2072, ಪಿ-2073, ಪಿ-2074, ಪಿ-2089 ಪ್ರಕರಣ ವ್ಯಕ್ತಿಗಳನ್ನು ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಉಳಿದ 12 ಪ್ರಕರಣ ವ್ಯಕ್ತಿಗಳನ್ನು ಕನ್ಯೆಕೊಳೂರು ಬಿಸಿಎಂ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.

ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕು
ಪ್ರಕಾಶ್ ಜಿ.ರಜಪೂತ್, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.