ಬೆಳಗುಂದಿ (ಸೈದಾಪುರ): ‘ಜೀವನದಲ್ಲಿ ಎದುರಾಗುವ ಸೋಲುಗಳು ಗೆಲುವಿನ ಆಟದ ಮೆಟ್ಟಿಲುಗಳನ್ನಾಗಿಸಿಕೊಂಡು ಯಶಸ್ಸು ಸಾಧಿಸಬೇಕು’ ಎಂದು ಗ್ರಾಮದ ಶರಣಗೌಡ ಮಾಲಿಪಾಟೀಲ ಅಭಿಪ್ರಾಯಪಟ್ಟರು.
ಸಮೀಪದ ಬೆಳಗುಂದಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆಟೋಟಗಳಲ್ಲಿ ಸೋಲು ಗೆಲವು ಸಹಜ ಪ್ರಕ್ರಿಯೆ. ಅವುಗಳನ್ನು ಸಮನಾಗಿ ಸ್ವೀಕರಿಸಬೇಕು. ಸೋಲಿನಲ್ಲಿ ಉಂಟಾದ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಿದಾಗ ಗೆಲುವಿನ ಸಿಹಿ ಹಂಚುವುದಕ್ಕೆ ಸಾಧ್ಯವಾಗುತ್ತದೆ. ಆಟವು ಮನುಷ್ಯನ ದೇಹ, ಮನಸ್ಸು ಉಲ್ಲಾಸ ಭರಿತಗೊಳಿಸುತ್ತದೆ’ ಎಂದರು.
ಈ ಸಂದರ್ಭಲ್ಲಿ ರಾಜುಗೌಡ ಪೊಲೀಸ್‌ಪಾಟೀಲ, ಯಂಕರೆಡ್ಡಿ ಪೊಲೀಸ್ ಪಾಟೀಲ್, ಶಿವುಗೌಡ ಕಲ್ಮನಿ, ಬಸ್ಸುಗೌಡ ಬೆಲೀಮಂಚಿ, ಶಾಂತಗೌಡ, ಯಂಕರೆಡ್ಡಿ, ಸಿದ್ದುಗೌಡ ಮಾಲಿಪಾಟೀಲ್, ಸಂಜಯಗೌಡ ಮಾಲಿಪಾಟೀಲ, ಚಂದ್ರುಗೌಡ, ಶಾಂತಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ್ ನಾಯಕ್, ಬಸವಂತ, ಯೇಸುರಾಜ್, ಸಾಬಣ್ಣ ವಡ್ಲೂರ್, ತಿಮ್ಮಾರೆಡ್ಡಿ, ಹಳ್ಳೆಪ್ಪ, ಸಾಬಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.