ಶಹಾಪುರ: ಭೂ ಮಾಪನ ಇಲಾಖೆಯಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿರುವ ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನ 41 ಪರವಾನಿಗೆ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸರ್ಕಾರದ ಇನ್ನಿತರ ಅಗತ್ಯ ಸೌಲಭ್ಯ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ಪರವಾನಿಗೆ ಭೂ ಮಾಪಕರ ತಾಲ್ಲೂಕು ಘಟಕದ ಸಂಘದ ಸದಸ್ಯರು ಬುಧವಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಂದಕುಮಾರ ಹಿಪ್ಪರಗಿ ಅವರಿಗೆ ಮನವಿ ಸಲ್ಲಿಸಿದರು.
ಮೊದಲು ಪೋಡಿ ಮತ್ತು ನಕ್ಷೆ ಸಿದ್ಧಪಡಿಸಲು ತಮ್ಮನ್ನು ಬಳಕೆ ಮಾಡುತ್ತಿದ್ದ ಸಿಬ್ಬಂದಿ ಈಗ ಸರ್ಕಾರಿ ಭೂ ಮಾಪನ ನೌಕರರು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ನಿಯೋಜಿಸುತ್ತಿದ್ದೇವೆ. ನಮಗೆ ಕನಿಷ್ಠ ಸೌಲಭ್ಯವನ್ನು ಒದಗಿಸುತ್ತಿಲ್ಲ. ಮೋಜಣಿ ಫೈಲ್‌ಗೆ ₹1,200 ನೀಡುತ್ತಾರೆ. ಅನಿವಾರ್ಯವಾಗಿ ವಿಳಂಬವಾದರೆ ₹360 ಮಾತ್ರ ನೀಡುತ್ತಾರೆ. ತಕರಾರು ಪ್ರಕರಣಗಳಿಗೆ ಹಣ ನೀಡುತ್ತಿಲ್ಲ. ಕ್ಷೇತ್ರದ ಕೆಲಸದ ಜತೆಯಲ್ಲಿ ಕಚೇರಿಯ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ಸರ್ಕಾರದ ಕನಿಷ್ಠ ಸೌಲಭ್ಯ ನೀಡಿದರೆ ನಮ್ಮ ಬದುಕಿಗೆ ಆಸರೆ ಅಗುತ್ತದೆ ಎಂದು ಆಗ್ರಹಿಸಿದರು.
ಸಂಘದ ಸದಸ್ಯರಾದ ಶರಣಪ್ಪ ಮೇಟಿ, ಬಿ.ಎಸ್ ಕರಿಬಾವಿ, ಚಂದ್ರಶೇಖರ, ರಾಮಸಿಂಗ್, ಶಂಕರೆಪ್ಪ ದೇಸಾಯಿ ಅತೀಕ್, ಮರೆಪ್ಪ, ಶಿವಲಿಂಗಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.