ADVERTISEMENT

ಹುಣಸಗಿ: ದಲಿತ ಕುಟುಂಬಗಳಿಗೆ ರಕ್ಷಣೆ  ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:37 IST
Last Updated 13 ಸೆಪ್ಟೆಂಬರ್ 2024, 15:37 IST
ಹುಣಸಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೆಲ ಕುಟುಂಬಗಳ ಮೇಲೆ ಬಹಿಷ್ಕಾರ ಘಟನೆಯನ್ನು ಖಂಡಿಸಿ ಹುಣಸಗಿಯಲ್ಲಿ ಪ್ರಗತಿಪರ ಸಾಮೂಹಿಕ ದಲಿತ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು
ಹುಣಸಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೆಲ ಕುಟುಂಬಗಳ ಮೇಲೆ ಬಹಿಷ್ಕಾರ ಘಟನೆಯನ್ನು ಖಂಡಿಸಿ ಹುಣಸಗಿಯಲ್ಲಿ ಪ್ರಗತಿಪರ ಸಾಮೂಹಿಕ ದಲಿತ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು   

ಹುಣಸಗಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ದಲಿತ ಕುಟುಂಬಗಳ ಮೇಲೆ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿಪರ ಸಾಮೂಹಿಕ ದಲಿತ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಶಿನಾಥ ಹಾದಿಮನಿ, ಹಾಗೂ ಬಸವರಾಜ ಕಾಮನಟಗಿ ಮಾತನಾಡಿ, ಗ್ರಾಮದಲ್ಲಿ ನಡೆದಿರುವ ಘಟನೆಯಿಂದ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ದಲಿತ ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ಬದುಕು ನಡೆಸುವಂತಾಗಿದೆ. ಆದ್ದರಿಂದ ಸೂಕ್ತ ರಕ್ಷಣೆ ಒದಗಿಸಬೇಕು. ಹಾಗೂ ಕೆಲವರು ಉದ್ದೇಶ ಪೂರ್ವಕವಾಗಿ ಗ್ರಾಮದಲ್ಲಿ ಆತಂಕ ಉಂಟುಮಾಡಿದ್ದಾರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪವಾಡೆಪ್ಪ ಕಕ್ಕೇರಾ, ಅಮಲಪ್ಪ ಹಾದಿಮನಿ ಮಾತನಾಡಿ, ರಾಜ್ಯದಲ್ಲಿ ಅಲ್ಲಲ್ಲಿ ಇಂತಹ ಪ್ರಕರಣಗಳು ಇಂದಿಗೂ ನಡೆಯುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಸಂದರ್ಭದಲ್ಲಿ ಅಮಲಪ್ಪ ಹಾದಿಮನಿ, ದೇವಪ್ಪ ಮಂಜಲಾಪುರ, ಹುಲಗಪ್ಪ ಬೈಲಕುಂಟಿ, ಯಮನಪ್ಪ ಚನ್ನೂರ, ಸಂತೋಷ ದೇವರಮನಿ, ಮಲ್ಲು ಮ್ಯಾಗೇರಿ, ತಾಯಪ್ಪ ಕನ್ನೇಳ್ಳಿ, ಸಂಗಮೇಶ ಕೊಡೇಕಲ್ಲ, ಭೀಮಣ್ಣ ಬಪ್ಪರಗಾ, ನಿಂಗಪ್ಪ, ಲಿಂಗಪ್ಪ ಅಗ್ನಿ, ಯಲ್ಲಪ್ಪ ಕಡದರಗಡ್ಡಿ, ಮಲ್ಲು ವಜ್ಜಲ ಸೇರಿದಂತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.