ADVERTISEMENT

ಅತ್ಯಾಚಾರಿ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:32 IST
Last Updated 19 ಫೆಬ್ರುವರಿ 2020, 11:32 IST
ಶಹಾಬಾದ್‌ ನಗದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ಶಹಾಬಾದ್‌ ನಗದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು   

ಶಹಾಬಾದ್‌: ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ, ಅಪರಾಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಾಜದ ವತಿಯಿಂದ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಜಿಲ್ಲಾ ಅಧ್ಯಕ್ಷ ಕೀಶನರಾವ ರಂಗದಳ, ನಗರ ಘಟಕದ ಅಧ್ಯಕ್ಷ ದತ್ತಾತ್ರೇಯ ಜಿಂಗಾಡೆ ನೇತೃತ್ವದಲ್ಲಿ ಜಗದಂಬಾ ದೇವಿ ದೇವಸ್ಥಾನದಿಂದ ಕೊರಳಿಗೆ ಕಪ್ಪು ಬಟ್ಟೆ ಹಾಕಿಕೊಂಡು, ಕಪ್ಪು ಫಲಕಗಳನ್ನು ಹಿಡಿದುಕೊಂಡು ಬಸ್ ನಿಲ್ದಾಣ, ರೈಲು ನಿಲ್ದಾಣದ ಮೂಲಕ ನೆಹರೂ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು

ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜಿಂಗಾಡೆ ಮಾತನಾಡಿ, ‘ಅತ್ಯಾಚಾರಿಗಳಿಗೆ ಕಾನೂನು ಮೂಲಕ ಕಠಿಣ ಶಿಕ್ಷೆಯಾದಾಗ ಮಾತ್ರ ಇಂಥ ಕೃತ್ಯ ಎಸಗುವವರಿಗೆ ಉಗ್ರ ಸಂದೇಶ ರವಾನೆ ಆಗುತ್ತದೆ’ ಎಂದು ಹೇಳಿದರು.

ADVERTISEMENT

ಸಮಾಜದ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಭಸ್ಮೆ, ರಮೇಶ ಮಹೇಂದ್ರಕರ್, ಲಕ್ಷ್ಮೀಕಾಂತ ಮಹೇಂದ್ರಕರ್, ಅತುಲ ಯಲಶೆಟ್ಟಿ, ಅಂಬರೀಷ ಪುಲಸೆ, ಸಚೀನ ಹಂಚಾಟೆ, ಕಾಶಿನಾಥ ಜೋಗಿ, ಸುನೀಲ ಭಗತ್, ಕನಕದಪ್ಪ ದಂಡಗುಲಕರ್, ಅನೀಲ ಹೀಬಾರೆ, ಉಮಾ ಮಹೇಶ ಜಬಡೆ, ಜಯಶ್ರೀ
ಜಿಂಗಾಡೆ, ನಂದಾ ಹಂಚಾಟೆ, ಪ್ರಪುಲ್ ಅಂಬೇಕರ್, ಡಾ.ಶ್ರೀನಿವಾಸ ಅಂಬೇಕರ್, ರಮೇಶ ಸರ್ವೋದಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.