ADVERTISEMENT

ಪ್ರವಾಹ ಪೀಡಿತರಿಗೆ ಆಹಾರ, ಬಟ್ಟೆ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 14:53 IST
Last Updated 29 ಆಗಸ್ಟ್ 2019, 14:53 IST
ಗುರುಮಠಕಲ್‌ ತಾಲ್ಲೂಕಿನ ಆನೂರು (ಬಿ) ಗ್ರಾಮದ ಸಂತ್ರಸ್ತ ಅಲೆಮಾರಿ ಕುಟುಂಬಗಳಿಗೆ ಧಾನ್ಯ, ಬಟ್ಟೆ ವಿತರಿಸಿ ಸಾಮಾಜಿಕ ಪರಿವರ್ತನ ಜನಾಂದೋಲನ ಅಧ್ಯಕ್ಷ ವಿಠಲ್ ಚಿಕಣಿ ಮಾತನಾಡಿದರು
ಗುರುಮಠಕಲ್‌ ತಾಲ್ಲೂಕಿನ ಆನೂರು (ಬಿ) ಗ್ರಾಮದ ಸಂತ್ರಸ್ತ ಅಲೆಮಾರಿ ಕುಟುಂಬಗಳಿಗೆ ಧಾನ್ಯ, ಬಟ್ಟೆ ವಿತರಿಸಿ ಸಾಮಾಜಿಕ ಪರಿವರ್ತನ ಜನಾಂದೋಲನ ಅಧ್ಯಕ್ಷ ವಿಠಲ್ ಚಿಕಣಿ ಮಾತನಾಡಿದರು   

ಯಾದಗಿರಿ: ‘ಗುರುಮಠಕಲ್ ತಾಲ್ಲೂಕಿನ ಆನೂರು (ಬಿ) ಗ್ರಾಮದಲ್ಲಿ ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ42 ಕುಟುಂಬಗಳ ಗುಡಿಸಲು ನಿವಾಸಿಗಳನ್ನುಸ್ಥಳಾಂತರಿಸಿಅವರಿಗೆ ಆಶ್ರಯ ಮನೆ ಕಟ್ಟಿಕೊಟ್ಟು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಬೇಕು’ ಎಂದುಸಾಮಾಜಿಕ ಪರಿವರ್ತನ ಜನಾಂದೋಲನ ಅಧ್ಯಕ್ಷ ವಿಠಲ ಚಿಕಣಿ ಒತ್ತಾಯಿಸಿದರು.

ಗುರುವಾರ ಆನೂರು (ಬಿ)ಗ್ರಾಮದ ಸಂತ್ರಸ್ತ ಅಲೆಮಾರಿ ಶಿಳ್ಳೆಕ್ಯಾತರ ಕುಟುಂಬಗಳಿಗೆ ಕಲಬುರ್ಗಿ ಡಾನ್ ಬಾಸ್ಕೊ ಸಂಸ್ಥೆ, ಸಂಸ್ಕಾರ ಪ್ರತಿಷ್ಠಾನಗಳ ಸಹಯೋಗದಲ್ಲಿ ದವಸ ಧಾನ್ಯ, ಬಟ್ಟೆ ವಿತರಿಸಿ ಮಾತನಾಡಿದರು.

‘ಗುಡಿಸಲಲ್ಲಿ ವಾಸಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತರಿಗೆ ಮನೆಗಳೇ ಇಲ್ಲ. ಅವರಿಗೆ ಪಡಿತರ ಚೀಟಿ ಆಧಾರ್‌ಕಾರ್ಡ್‌ ಇಲ್ಲದೆ ಇರುವುದರಿಂದ ಅವರು ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. ಪ್ರವಾಹಕ್ಕೆ ಸಿಲುಕಿ ಎಲ್ಲ ಕಳೆದುಕೊಂಡರೂ ಇದುವರೆಗೆ ಜಿಲ್ಲಾಡಳಿದಿಂದಸಹಾಯಸಿಕ್ಕಿಲ್ಲ’ ಎಂದರು.

ADVERTISEMENT

‘ಗ್ರಾಮದಲ್ಲಿ ವಾಸವಾಗಿರುವ ಈ ಕುಟುಂಬಗಳ ಪೈಕಿ 70 ಮಕ್ಕಳಲ್ಲಿ 1 ಒಂದೇ ಮಗು ಪಕ್ಕದ ಚಿಗಾನೂರು ಗ್ರಾಮದ ಶಾಲೆಗೆ ಹೋಗುತ್ತದೆ. ಇನ್ನುಳಿದ 69 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಸರ್ಕಾರ ಇವರತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಶಿವರಾಜಕುಮಾರ ಗುತ್ತೇದಾರ, ವಿಜಯಕುಮಾರ ಮಠಪತಿ, ಸತೀಶ ಡಿ., ಸುನಿಲ್ ಪೂಜಾರಿ, ಶಾಂತು ಯಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.