ADVERTISEMENT

ಭೀಮಾ ಪ್ಲ್ಯಾಂಕ್‌ ಕಾಮಗಾರಿ ತಿಂಗಳಲ್ಲಿ ಕಾಮಗಾರಿ ಆರಂಭಿಸಲು ಭೀಮಣ್ಣ ಮೇಟಿ ಆಗ್ರಹ

ಭೀಮಾ ಪ್ಲ್ಯಾಂಕ್‌ ಕಾಮಗಾರಿ ನನೆಗುದಿಗೆ, ರೈತರಿಗೆ ಸಂಕಷ್ಟ: ಡಾ.ಭೀಮಣ್ಣ ಮೇಟಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 4:18 IST
Last Updated 9 ಮಾರ್ಚ್ 2021, 4:18 IST
ಡಾ.ಭೀಮಣ್ಣ ಮೇಟಿ
ಡಾ.ಭೀಮಣ್ಣ ಮೇಟಿ   

ಯಾದಗಿರಿ: ‘ಭೀಮಾ ಪ್ಲ್ಯಾಂಕ್‌ ಕಾಮಗಾರಿ ಒಂದು ತಿಂಗಳಲ್ಲಿ ಆರಂಭಿಸಬೇಕು. ಇಲ್ಲಿದಿದ್ದರೆ ವಡಗೇರಾ ತಾಲ್ಲೂಕಿನ ಸಂಗಮ ದಿಂದ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯವರೆಗೆ ಪಾದಯಾತ್ರೆ ಮಾಡಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಡಾ.ಭೀಮಣ್ಣ ಮೇಟಿ ಹೇಳಿದರು.

‘23 ಕಿ.ಮೀ ವ್ಯಾಪ್ತಿಯ ಕಾಲುವೆಯಲ್ಲಿ ಕೆಲ ತಿಂಗಳಿಂದ ಕೇವಲ 4 ಕಿ.ಮಿ. ಮಾತ್ರ ನಿರ್ಮಾಣವಾಗಿದೆ. ಅದು ಕೂಡ ಕಳಪೆ ಕಾಮಗಾರಿ ಮಾಡಲಾಗಿದೆ’ ಎಂದು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಪಾದಯಾತ್ರೆ ಮಾಡಲಾಗುವುದು. ರೈತರ ಜೊತೆ ಸೇರಿ ಪ್ರತಿಭಟನೆ ಮಾಡಲಾಗುವುದು. ಇದಕ್ಕೂ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದರು.
‘4 ಕಿ.ಮೀ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಭೂಮಿ ಸ್ವಾಧೀನ ಪಡೆಸಿಕೊಳ್ಳದೇ ಅಲ್ಲಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ರೈತರಿಗೆ ಟೆಂಡರ್‌ದಾರರು ತಿಳಿದಷ್ಟು ಹಣ ನೀಡುತ್ತಿದ್ದಾರೆ. ಹೀಗಾಗಿ ಟೆಂಡರ್‌ದಾರರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಭೀಮಾ ಪ್ಲ್ಯಾಂಕ್‌ ಕಾಮಗಾರಿಯೂ ₹32.19 ಕೋಟಿ ಅಂದಾಜು ಮೊತ್ತವಿದ್ದು, ₹27.81 ಕೋಟಿ ಟೆಂಡರ್‌ ಮೊತ್ತವಾಗಿದೆ. 11 ತಿಂಗಳು ಕಾಲಾವಧಿ ನಿಗದಿ ಪಡಿಸಲಾಗಿತ್ತು. ಎರಡು ವರ್ಷ ಕಳೆದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಇದರಿಂದ ಬಹುನಿರೀಕ್ಷಿತ ಯೋಜನೆ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ಕಾಮಗಾರಿ ಶೀಘ್ರ ಮುಗಿಯುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಭೀಮಣ್ಣ ಬೂದಿಹಾಳ, ದೇವು ಜಡಿ, ಬೀರಪ್ಪ ಬಾಗಲಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.