ADVERTISEMENT

ಭಾವೈಕ್ಯದ ಸಂದೇಶ ಸಾರಿದ ಈದ್

​ಪ್ರಜಾವಾಣಿ ವಾರ್ತೆ
Published 4 ಮೇ 2022, 4:07 IST
Last Updated 4 ಮೇ 2022, 4:07 IST
ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು
ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು   

ಶಹಾಪುರ: ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಹಬ್ಬದ ಕಳೆಯನ್ನು ನುಂಗಿತ್ತು. ಪ್ರಸಕ್ತ ವರ್ಷ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತ್ರ್ ಅನ್ನು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ನಗರದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅದರಲ್ಲಿ ಮುಸ್ಲಿಂ ಸಮುದಾಯದ ಮನೆಗಳಿಗೆ ಹಿಂದೂಗಳು ಮನೆಗೆ ತೆರಳಿ ಸುರಕುರುಮಾ ಸವಿದರು.

ಅದರಲ್ಲಿ ಪ್ರಸಕ್ತ ವರ್ಷ ಬಸವ ಜಯಂತಿಯು ಒಂದೇ ದಿನ ಆಗಮಿಸಿದ್ದರಿಂದ 2 ಸಮುದಾಯಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಭರವಸೆಯ ಆಲಿಂಗನವು ಕಾಣಿಸುತ್ತಿತ್ತು. ಬೆಳಿಗ್ಗೆ ಮುಸ್ಲಿಮರು ಹಬ್ಬ ಆಚರಿಸಿದರೆ ಸಂಜೆ ಹಿಂದೂ ಸಮಾಜದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಎಲ್ಲೆಡೆ ಕಾಣಿಸಿತು.

ADVERTISEMENT

ಮುಖಂಡರಾದ ಗೌಸ ಮೈನುದ್ದೀನ ಖಾಜಿ, ಸೈಯಾದ್ದುದ್ದೀನ್ ಖಾದ್ರಿ, ಎಮ್.ಡಿ ಸಲೀಂ ಸಂಗ್ರಾಂ, ಸಯ್ಯದ ಖಾಲಿದ, ಯೂಸೂಫ್ ಸಿದ್ದಕಿ, ನಿಜಾಮುದ್ದಿನ ಜಮಖಂಡಿ,ಸಯ್ಯದ ಇಬ್ರಾಹಿಂಸಾಬ್ ಜಮದಾರ, ಮಹ್ಮದ ಗೌಸ್ ಗೋಗಿ, ನಬಿಸಾಬ್ ಶಿರವಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.