ಯಾದಗಿರಿ: ‘ಪರಿಸರ ಸಂರಕ್ಷಣೆ ಕಾರ್ಯವನ್ನು ಧಾರ್ಮಿಕ ಕಾರ್ಯವೆಂದು ಅರಿತುಕೊಂಡಾಗ ಪರಿಸರ ಸಂರಕ್ಷಿಸಲು ಸಾಧ್ಯ’ ಎಂದು ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.
ವೈದ್ಯರ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಸಿ ನೆಟ್ಟು ಮಾತನಾಡಿದ ಅವರು, ‘ನಮ್ಮಲ್ಲಿ ಜನರು ಧಾರ್ಮಿಕ ಕಾರ್ಯಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಾರೆ. ಆದರೆ, ಅದೇ ಧಾರ್ಮಿಕತೆಯ ಹೆಸರಿನಲ್ಲಿ ಪರಿಸರ ನಾ ಶಮಾಡುವಂತಹ ಹಲವಾರು ಕಾರ್ಯಕ್ರಮ ನಡೆಯುತ್ತವೆ. ಇದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.
‘ಪರಿಸರ ಸಂರಕ್ಷಿಸುವ ಗುರಿ ಅಚಲವಾಗಿದ್ದಾಗ ನಮ್ಮ ಪರಿಸರವನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳಬಹುದು. ಅದರಂತೆ ಪ್ರತಿಯೊಬ್ಬ ವೈದ್ಯ ನೆಟ್ಟ ಸಸಿಯನ್ನು ದೊಡ್ಡದಾಗುವರೆಗೆ ಪೋಷಣೆ ಮಾಡುವುದು ಅಗತ್ಯ’ ಎಂದರು.
ಡಾ. ವಿಜಯಕುಮಾರ್, ಡಾ.ಪ್ರಸನ್ನ ಪಾಟೀಲ, ಡಾ. ರಾಜೇಂದ್ರ, ಡಾ. ಹೊನಕುಂಟಿ, ಡಾ. ಪ್ರದೀಪ ರೆಡ್ಡಿ, ಡಾ. ಶರಣಭೂಪಾಲರೆಡ್ಡಿ, ಡಾ.ವಿಜಯಕುಮಾರ, ಡಾ. ಸಂಗಮ್ಮ ಮುದ್ನಾಳ, ಡಾ. ಪ್ರಶಾಂತ ಬಾಸೂತ್ಕರ್, ಡಾ.ವೈಜನಾಥ ಹೋರುಂಚಾ, ಡಾ. ವೀರೇಶ ಜಾಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.