ADVERTISEMENT

ಸೇಂದಿ ಮಾರಾಟ: 14 ಜನ ಆರೋಪಿಗಳ ಸೆರೆ

ಮೂರು ಆಟೊ, ₹5,41 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 15:58 IST
Last Updated 4 ಜುಲೈ 2022, 15:58 IST
ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ 14 ಜನ ಆರೋಪಿಗಳನ್ನು ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ
ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ 14 ಜನ ಆರೋಪಿಗಳನ್ನು ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ   

ಯಾದಗಿರಿ: ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ 14 ಜನ ಆರೋಪಿಗಳನ್ನು ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ನೀರು ಸರಬರಾಜು ಘಟಕದ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ವಿಜಯಕುಮಾರ ಉಮಾಕಾಂತ ಕೊನೆಮನಿ, ಮರಲಿಂಗಪ್ಪ ಭೀಮರಾಯ ಸಿದ್ದಿ, ದೇವಿಂದ್ರಪ್ಪ ಲಕ್ಷ್ಮಣ ದೊಡಮನಿ, ಶಾಂತಪ್ಪ ಮಹಾದೇವಪ್ಪ ಚೋಟು, ಸದಾಶಿವಪ್ಪ ಮಲ್ಲಪ್ಪ ದನಕಾಯಿ, ಮಹೆಬೂಬ ಖಾಜಾಮೈನೊದ್ದಿನ್‌, ರಾಜಪ್ಪ ಹಣಮಂತ ನಾನೇಕ, ಮಲ್ಲಪ್ಪ ಬಸಪ್ಪ ಹಲಗಿ, ರಾಜಶೇಖರ ಶರಣಪ್ಪ, ಅಲೀಪಟೇಲ್‌ ಮಹೆಬೂಬ ಪಟೇಲ್‌, ಶಂಕ್ರಪ್ಪ ಭೀಮಪ್ಪ ದನಕಾಯಿ, ಸಿದ್ದಪ್ಪ ತಿಪ್ಪಣ್ಣ ಮುದ್ನಾಳ, ತಿಪ್ಪಣ್ಣ ಸಾಬಣ್ಣ ಕೊನೆಮನಿ, ಬಾಲಪ್ಪ ಹಣಮಂತ ನಕ್ಕಲ ಬಂಧಿತರು.

ಪ್ರಕರಣದಲ್ಲಿ ಸೇಂದಿ ಸಾಗಾಣಿಕೆ ಮಾಡುವ ಒಟ್ಟು ಮೂರು ಆಟೊ ತ್ರಿಚಕ್ರವಾಹನಗಳು, 33 ಲೀಟರ್ ಕಲಬೆರಕೆ ಸೇಂದಿ ಸಹಿತ ವಶಪಡಿಸಿಕೊಳ್ಳಲಾಗಿದೆ. ₹5,41,450 ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಂಡು 14 ಜನ ಆರೋಪಿಗಳನ್ನು ಸೇಂದಿ ಸಾಗಾಣಿಕೆ ಮಾಡುವಾಗ ಸ್ಥಳದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್‌ಟಿ, ಅಬಕಾರಿ ಉಪ ನಿರೀಕ್ಷಕ ಬಸವರಾಜ, ಶರಣು ನಂದಿಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಸಿಬ್ಬಂದಿಯಾದ ಪ್ರವೀಣಕುಮಾರ, ಮಹ್ಮದ್‌ ರಫಿ, ನೀಲಕಂಠ, ಶರಣಬಸಪ್ಪ, ಶರೀಫ, ಶೇಖರ, ದೊಂಡಿಬಾ, ಶಂಕರ, ಗುರುನಾಥ, ಅನಿಲ್, ಸುಭಾನಿ, ನಾಗರಾಜ, ಜಟ್ಟೆಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.