ADVERTISEMENT

ಕೃಷಿಕ ಸಮಾಜದ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:59 IST
Last Updated 3 ಜುಲೈ 2025, 14:59 IST

ಹುಣಸಗಿ: ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಕಾರ್ಯಕಾರಣಿ ಸಭೆ ನಡೆಯಿತು

ಈ ವೇಳೆ ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗಣ್ಣ ಸಾಹುಕಾರ ದಂಡಿನ್ ಮಾತನಾಡಿ, ‘ರೈತರು ಹಾಗು ಸಾರ್ವಜನರಿಗೆ ಸರ್ವ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಹಾಗೂ ಯೋಜನೆಗಳ ಬಗ್ಗೆ ವಿವರಿಸಿದಾಗ ಮಾತ್ರ ಪ್ರಯೋಜನವಾಗಲಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆಯು ರೈತರಿಗೆ ಉತ್ತಮ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸಲಿ. ಸರ್ಕಾರದ ಯೋಜನೆಗಳ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಲಿ ಎಂದು ಹೇಳಿದರು.

ADVERTISEMENT

ಸಹಾಯಕ ಕೃಷಿ ಅಧಿಕಾರಿ ಸಿದ್ದಾರ್ಥ ಪಾಟೀಲ್ ಮಾತನಾಡಿ, ರೈತರಿಗೆ ಹಲವಾರು ಯೋಜನೆಗಳಡಿ ಕೃಷಿ ಯಾಂತ್ರಿಕರಣ, ತುಂತುರು ನೀರಾವರಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕುರಿತು ಮಾಹಿತಿ ನೀಡಿದರು.

ಪಶುವೈದ್ಯಾಧಿಕಾರಿ ಡಾ.ಮೆಹಬೂಬಸಾಬ ಖಾಜಿ ಮಾತನಾಡಿ, ರೈತಾಪಿ ಜನರ ಜಾನುವಾರುಗಳಿಗೆ ಮೇವಿನ ಬೀಜ ಹಾಗೂ ಅಗತ್ಯ ಲಸಿಕೆಗಳು ಮತ್ತು ಹೈನುಗಾರಿಕೆ ಸೇರಿದಂತೆ ಕುರಿ-ಕೋಳಿ ಸಾಕಾಣಿಕೆಗೆ ಇಲಾಖೆಯಿಂದ ನೆರವು ಪ್ರೋತ್ಸಾಹ ಕೊಡಲಾಗುತ್ತಿದ್ದು, ಸದುಪಯೋಗಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭಸಲ್ಲಿ ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಮಾಲಿಪಾಟೀಲ್, ರೇಷ್ಮೆ ಇಲಾಖೆ ಅಧಿಕಾರಿ ಸಂಗಮೇಶ, ಸಿದ್ದಣ್ಣ, ಚಂದ್ರಶೇಖರ ದೇಸಾಯಿ, ನೀಲಕಂಠ, ಮಲ್ಲಣ್ಣ ಸೇರಿದಂತೆ ಕೃಷಿಕ ಸಮಾಜದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.