ADVERTISEMENT

ರೈತರ ಹಿತ ಮರೆತು ಆರ್‌ಎಸ್‌ಎಸ್‌ ಹಿಂದೆ ಬಿದ್ದ ಸರ್ಕಾರ: ಹಣಮೇಗೌಡ ಬೀರನಕಲ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:30 IST
Last Updated 4 ನವೆಂಬರ್ 2025, 7:30 IST
ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳೆನಷ್ಟ ಪರಿಹಾರ ವಿತರಿಸುವಂತೆ ಮನವಿ ಪತ್ರ ನೀಡಲಾಯಿತು
ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳೆನಷ್ಟ ಪರಿಹಾರ ವಿತರಿಸುವಂತೆ ಮನವಿ ಪತ್ರ ನೀಡಲಾಯಿತು   

ಯಾದಗಿರಿ: ‘ಅತಿವೃಷ್ಟಿಯಿಂದ ಅನ್ನದಾತ ನಲುಗಿದ್ದು, ಸರ್ಕಾರ ರೈತರ ಹಿತ ಕಾಯುವ ಬದಲು ಆರ್‌ಎಸ್‌ಎಸ್‌ ನಿರ್ಬಂಧ, ಅಧಿಕಾರ ಹಸ್ತಾಂತರದ ಹಿಂದೆ ಬಿದ್ದಿದೆ’ ಎಂದು ರೈತ ಮುಖಂಡ ಹಣಮೇಗೌಡ ಬೀರನಕಲ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ನಷ್ಟದ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸುವಂತೆ ಆಗ್ರಹಿಸಿ ಅವರು ಮನವಿ ಪತ್ರ ಸಲ್ಲಿಸಿದರು.

‘ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟರ್ ಬೆಳೆಹಾನಿ ಮತ್ತು 500 ಕ್ಕೂ ಹೆಚ್ಚು ಮನೆ ಕುಸಿತವಾಗಿದ್ದು, ರೈತರು ಬೀದಿಪಾಲಾಗಿದ್ದಾರೆ. ತಿಂಗಳಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದರು.

ADVERTISEMENT

‘ಸತತ ನಷ್ಟಕ್ಕೆ ತುತ್ತಾದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್ ಆರಂಭದೊಳಗೆ ನಾಲ್ಕು ವಾರಗಳ ಸಮಯಾವಕಾಶದಲ್ಲಿ ರೈತರಿಗೆ ಪರಿಹಾರ ತಲುಪದಿದ್ದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ರುದ್ರಾಂಬಿಕೆ ಪಾಟೀಲ, ರಾಜಶೇಖರ ಹಾಲಗೇರ, ಹಣಮಂತ್ರಾಯಗೌಡ ತೇಕರಾಳ, ಅಶೋಕ ವಾಟಕರ, ವಿಜಯ ಕುಮಾರ, ಕಾಶೀನಾಥ ನಾಟೆಕಾರ, ವಿಶ್ವನಾಥ ನಾಯಕ, ವಿಜಯಕುಮಾರ, ಸೀಮನ್‌ ತುಮಕೂರ, ಶರಣು, ನಾಗರಾಜ ರಾಮಸಮುದ್ರ, ವಿಜಯ ಮುಷ್ಟೂರ, ಸೋಯಬ್‌, ಮಲ್ಲು ತುಮಕೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.