ADVERTISEMENT

ನಾಲ್ಕು ರೀತಿಯ ಆರೋಗ್ಯ ಅವಶ್ಯ: ಶಾಬು ಫ್ರಾನ್ಸಿಸ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:37 IST
Last Updated 26 ಜುಲೈ 2025, 7:37 IST
ಯಾದಗಿರಿ ನಗರದ ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದಲ್ಲಿ ‘ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಬೆಂಬಲ’ ಯೋಜನೆಯಡಿಯಲ್ಲಿ ಶುಕ್ರವಾರ ಒಂದು ದಿನದ ಮಾನಸಿಕ ಆರೋಗ್ಯ ವೃತ್ತಿಪರರ ಕಾರ್ಯಾಗಾರ ನಡೆಯಿತು
ಯಾದಗಿರಿ ನಗರದ ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದಲ್ಲಿ ‘ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಬೆಂಬಲ’ ಯೋಜನೆಯಡಿಯಲ್ಲಿ ಶುಕ್ರವಾರ ಒಂದು ದಿನದ ಮಾನಸಿಕ ಆರೋಗ್ಯ ವೃತ್ತಿಪರರ ಕಾರ್ಯಾಗಾರ ನಡೆಯಿತು   

ಯಾದಗಿರಿ: ‘ಪ್ರತಿಯೊಬ್ಬರಿಗೂ ನಾಲ್ಕು ರೀತಿಯ ಆರೋಗ್ಯ ಅವಶ್ಯ’ ಎಂದು ಡಾನ್ ಬಾಸ್ಕೊ ಸಂಸ್ಥೆಯ ನಿರ್ದೇಶಕ ಶಾಬು ಫ್ರಾನ್ಸಿಸ್ ಹೇಳಿದರು.

ನಗರದ ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರ, ಬ್ರೆಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ‘ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಬೆಂಬಲ’ ಯೋಜನೆಯಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಮಾನಸಿಕ ಆರೋಗ್ಯ ವೃತ್ತಿಪರರ ಕಾರ್ಯಾಗಾರದಲ್ಲಿ ಮಾತನಾಡಿದರು.

‘ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಪ್ರತಿಯೊಬ್ಬರಿಗೂಬೇಕು. ಒಂದು ಆರೋಗ್ಯ ಇದ್ದು, ಮತ್ತೊಂದರಲ್ಲಿ ಕಡಿಮೆಯಾದರೆ ಖಿನ್ನತೆಗೆ ಒಳಗಾಗುತ್ತಾನೆ’ ಎಂದು ತಿಳಿಸಿದರು.

ADVERTISEMENT

‘ಮೈಂಡ್ಸ್ ಯೋಜನೆ ಎರಡು ವರ್ಷದ ಯೋಜನೆಯಾಗಿದೆ. ಜಿಲ್ಲೆಯ 52 ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಸುಮಾರು 3,000 ಮಕ್ಕಳು, 3,000 ಪೋಷಕರು ಮತ್ತು 100ಕ್ಕೂ ಹೆಚ್ಚು ಶಿಕ್ಷಕರು ಇದರ ಲಾಭ ಪಡೆಯುತ್ತಿದ್ದಾರೆ. ಪೋಷಕರ ಸಭೆಗಳನ್ನು ಶಾಲಾ ಮಟ್ಟದಲ್ಲಿ ಬಿಇಒ ಅನುಮತಿಯಿಂದ ಆಯೋಜಿಸಲಾಗಿದೆ. ಪ್ರಸ್ತುತ ‘ಮಾಡೆಲ್‌–2’ ತರಗತಿಗಳು ನಡೆಯುತ್ತಿದ್ದು, ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಹೇಳಿದರು.

ಡಾನ್ ಬಾಸ್ಕೊ ಸಂಸ್ಥೆಯ ರೆಕ್ಟರ್ ಮತ್ತು ಮ್ಯಾನೇಜರ್ ಫಾ.ಸಜ್ಜಿ ಜಾರ್ಜ್ ಮಾತನಾಡಿ,‘ ಮಾನಸಿಕ ಆರೋಗ್ಯ ಅತ್ಯಂತ ಅಮೂಲ್ಯವಾಗಿದೆ. ಈ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು’ ಎಂದು ಯಿಮ್ಸ್‌ ಮತ್ತು ಡಿಎಂಎಚ್‌ಒ ಅಧಿಕಾರಿಗಳಿಗೆ ತಿಳಿಸಿದರು. ಸಂಸ್ಥೆಯು ಕಳೆದ 22 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನೂ ವಿವರಿಸಿದರು.

ಯಿಮ್ಸ್‌ ಜಿಲ್ಲಾ ಮಾನಸಿಕ ವೈದ್ಯಾಧಿಕಾರಿ ಡಾ.ಪ್ರೀತಮ್ ಮಾತನಾಡಿ,‘ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಅಗತ್ಯ. ಇತ್ತೀಚಿಗೆ ಶಿಕ್ಷಕರ ಮತ್ತು ಸ್ವಯಂ ಸೇವಕರಿಗೆ ನಡೆದ ಕಾರ್ಯಾಗಾರದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗಿದೆ’ ಎಂದು ಹೇಳಿದರು.

ಡಿಎಂಎಚ್‌ಒ ಮಾನಸಿಕ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್,‘ಡಾನ್ ಬಾಸ್ಕೊ ಸಂಸ್ಥೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸುತ್ತಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಧಾರವಾಡದ ಡಿಮ್ಹಾನ್ಸ್‌ ಮೈಂಡ್ಸ್‌ ಯೋಜನೆಯ ಗಾಯತ್ರಿ ಹೆಗಡೆ ಅವರು ಉಪನ್ಯಾಸ ನೀಡಿದರು.

ಮೈಂಡ್ಸ್ ಯೋಜನೆಯ ಸಂಯೋಜಕ ಶರಣಪ್ಪ ಸಿ. ನಿರೂಪಿಸಿದರು. ಮೈಂಡ್ಸ್ ಯೋಜನೆಯ ಆಪ್ತ ಸಮಾಲೋಚಕ ಸೂರ್ಯಕಾಂತ, ಡಿಬಿಟೆಕ್ ಸಂಯೋಜಕ ಮಲ್ಲಿಕಾರ್ಜುನ ಕುರಕುಂದ, ಜೀವನೋಪಾಯ ಯೋಜನೆಯ ಸಂಯೋಜಕ ದೇವಿಂದ್ರಪ್ಪ, ಪೋಸ್ಟರ್ ಕೇರ್ ಸಂಯೋಜಕ ನಾಗಪ್ಪ ಗಮಗ ಸೇರಿದಂತೆ ಡಿಎಂಎಚ್‌ಒ ಮತ್ತು ಯಿಮ್ಸ್‌ ಸಿಬ್ಬಂದಿ ಭಾಗವಹಿಸಿದ್ದರು.

ಮಾನಸಿಕ ಆರೋಗ್ಯದಿಂದ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅಭಿವೃದ್ಧಿಯಾಗಲು ನಮ್ಮ ಒಳಗಿರುವ ಶಕ್ತಿಯ ಮೂಲಕವೇ ಸಾಧ್ಯ
ಫಾ.ಕುನುನ್ ಥಾಮಸ್ ಡಾನ್ ಬಾಸ್ಕೊ ಕಾಲೇಜು ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.