ವಡಗೇರಾ (ಯಾದಗಿರಿ): ತಾಲ್ಲೂಕಿನ ಹಂಚನಾಳ ಗ್ರಾಮದಲ್ಲಿ ವಿದ್ಯುತ್ ಹರಿದು ಮೇಕೆ ಸಾವನ್ನಪ್ಪಿದೆ.
ಭಾನುವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸಮಯದಲ್ಲಿ ಗುರಿಗಾಹಿ ತನ್ನ ಕುರಿಗಳನ್ನು ಮೇಯಿಸಲು ಹೊಡೆದುಕೊಂಡು ಹೋಗುವ ಸಮಯದಲ್ಲಿ ಬೋರವೆಲ್‌ಗೆ ವಿದ್ಯುತ್ ತಂತಿ ಅಳವಡಿಸಿ ಮುಖ್ಯ ರಸ್ತೆಯ ಮೇಲೆ ಅಗೆದು ಅದನ್ನು ವಿದ್ಯುತ್ ಕಂಬಕ್ಕೆ ಸಂಪರ್ಕ ಕೊಟ್ಟಿದ್ದಾರೆ.
ಆದರೆ, ಮಳೆಯಿಂದಾಗಿ ತಂತಿಯಲ್ಲಿ ವಿದ್ಯುತ್ ಹರಿದು ರಸ್ತೆಯ ಮೇಲೆ ಹೋಗುತ್ತಿದ್ದ ಮೇಕೆಗೆ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ರವಿ ಪೊಲೀಸಗೌಡ ಎಂಬುವವರಿಗೆ ಸೇರಿದ ಮೇಕೆಯಾಗಿದ್ದು, ಸುಮಾರು ₹10 ಸಾವಿರ ನಷ್ಟವಾಗಿದೆ ಎಂದು ಕುರಿಗಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.