ADVERTISEMENT

ಮತ್ತು ಬರುವ ಔಷಧಿ ನೀಡಿ ಚಿನ್ನ ಕಳವು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:59 IST
Last Updated 19 ಆಗಸ್ಟ್ 2021, 3:59 IST
ವಂಚನೆಗೆ ಒಳಗಾದ ವೃದ್ಧೆ
ವಂಚನೆಗೆ ಒಳಗಾದ ವೃದ್ಧೆ   

ಕಕ್ಕೇರಾ: ಪಟ್ಟಣದ ಸಂತೆಗೆ ಬಂದಿದ್ದ ವೃದ್ಧೆಯರ ಸ್ನೇಹ ಬೆಳಸಿದ ಕಳ್ಳರು ‘ಮತ್ತು’ ಬರಿಸುವ ಔಷಧಿ ನೀಡಿ ಅವರ ಕೈಯಲ್ಲಿ ನಕಲಿ ಚಿನ್ನಾಭರಣವಿಟ್ಟು ಅಸಲಿ ಬಂಗಾರ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಭೀಮವ್ವ ಹೆಳವರ್ ಮತ್ತು ದ್ಯಾಮವ್ವ ಪೂಲಭಾವಿ ಎಂಬುವವರು ಕಳ್ಳರ ಮಾತಿಗೆ ಮರುಳಾಗಿ ಒಂದು ತೊಲಿ ಬಂಗಾರ ಕಳೆದುಕೊಂಡರು.

ಕೂಡಲೇ ಈ ಬಗ್ಗೆ ಸ್ಥಳೀಯರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಧ್ವನಿವರ್ಧಕ ಮೂಲಕಪೊಲೀಸರು ಕಳ್ಳರ ಬಗ್ಗೆ ಜಾಗೃತಿ ಮೂಡಿಸಿದರು.

ADVERTISEMENT

ಹಳೆಯ ಚಿನ್ನಾಭರಣ ತೊಳೆದುಕೊಡುವುದಾಗಿ ಹೇಳಿ ನಕಲಿ ಬಂಗಾರ ನೀಡಿ ಮೋಸಗೊಳಿಸುವ ಯತ್ನ ಕಂಡುಬಂದರೆ ಸ್ಥಳೀಯ ಉಪಠಾಣೆ 9740883772 ಹಾಗೂ ಕೊಡೇಕಲ್ ಠಾಣೆಯ 9480803584 ಸಂಖ್ಯೆಗೆ ಕರೆ ಮಾಡುವಂತೆ ಕೊಡೇಕಲ್ಪಿಎಸ್ಐ ಬಾಷುಮಿಯಾ ಕೆಂಚೂರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.