ADVERTISEMENT

ಯಾದಗಿರಿ | ಬಿಳ್ಹಾರ ಗ್ರಾ.ಪಂ: ಚಂದ್ರಕಲಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:30 IST
Last Updated 26 ನವೆಂಬರ್ 2022, 4:30 IST
ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಪಂ ನೂತನ ಅಧ್ಯಕ್ಷರನ್ನಾಗಿ ಚಂದ್ರಕಲಾ ಬಸವರಾಜ ಪಾಟೀಲ ಮಾಚನೂರ ಅವಿರೋಧವಾಗಿ ಆಯ್ಕೆ ಮಾಡಲಾಯಿತು
ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಪಂ ನೂತನ ಅಧ್ಯಕ್ಷರನ್ನಾಗಿ ಚಂದ್ರಕಲಾ ಬಸವರಾಜ ಪಾಟೀಲ ಮಾಚನೂರ ಅವಿರೋಧವಾಗಿ ಆಯ್ಕೆ ಮಾಡಲಾಯಿತು   

ಯಾದಗಿರಿ: ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರನ್ನಾಗಿ ಚಂದ್ರಕಲಾ ಪಾಟೀಲ ಮಾಚನೂರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಬಸವರಾಜ ಸಜ್ಜನ ತಿಳಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಕಾರಣ ಅಧ್ಯಕ್ಷ ಸ್ಥಾನವು ತೆರವಾಗಿತ್ತು. ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಚಂದ್ರಕಲಾ ಒಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವನಾಧಿಕಾರಿ ಮಾಹಿತಿ ನೀಡಿದರು.

ಕಾಂಗ್ರೆಸ್‌ ಮುಖಂಡ ಬಸ್ಸುಗೌಡ ಬಿಳ್ಹಾರ, ನಾಗರಾಜ ಗೌಡ ಬಿಳ್ಹಾರ ನೇತೃತ್ವದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ADVERTISEMENT

ವಕ್ಫ್‌ ಬೋರ್ಡ್‌ ಜಿಲ್ಲಾಧ್ಯಕ್ಷ ಜಹೀರ್ ಸವೆರಾ, ಸೋಮನಾಥ ರೆಡ್ಡಿಗೌಡ ಮಾಚನೂರ, ಮಲ್ಲನಗೌಡ ರಾಚರೆಡ್ಡಿ, ಅಮರಪ್ಪ ಸಾಹು, ಮಲರಡ್ಡಿ ಗೌಡ, ಚಂದ್ರುಗೌಡ, ಮಲ್ಲಿಕಾರ್ಜುನರೆಡ್ಡಿ, ಚನ್ನಪ್ಪಗೌಡ, ಅಜಯ್‌ರೆಡ್ಡಿ, ಬಂಧುಗೌಡ ಬೆಂಡೆಬೆಂಬಳಿ, ಸಂದೀಪ್‌ ಗೌಡ ಗೋನಾಲ್, ಶ್ರೀನಿವಾಸ ಕಲಾಲ್, ಮಲ್ಲುಶಿವಪುರ, ಮಾಣಿಕರೆರೆಡ್ಡಿ ಕುರಕುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.