ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಕ್ರೈಸ್ತರು ಯೇಸುಕ್ರಿಸ್ತನ ಮರಣದ ದಿನದ ಅಂಗವಾಗಿ ಗುಡ್ ಪ್ರೈಡೇಯನ್ನು ಶ್ರದ್ಧೆ–, ಭಕ್ತಿಯಿಂದ ಆಚರಿಸಲಾಯಿತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಿದವು.
ಶುಕ್ರವಾರ ಬೆಳಿಗ್ಗೆ 11ರಿಂದ ವಿವಿಧ ಚರ್ಚ್ ಗಳಲ್ಲಿ ಪ್ರಾರ್ಥನಾ ಕೂಟಗಳು, ಕ್ರಿಸ್ತನ ಸಂದೇಶ ತಿಳಿಸುವುದು ಸೇರಿದಂತೆ ಗುಡ್ ಫ್ರೈಡೇಯ ಆಚರಣೆಗಳು ಜರುಗಿದವು. 40 ದಿನಗಳಿಂದ ಉಪವಾಸ ವ್ರತದಲ್ಲಿದ್ದವರಿಗೆ ಕೆಲವೆಡೆ ಹಣ್ಣು, ಮಜ್ಜಿಗೆ, ನಿಂಬೆರಸ, ಉಪಹಾರ ವಿತರಣೆ ಮಾಡಲಾಯಿತು.
ಕೇಂದ್ರ ಮೆಥೋಡಿಸ್ಟ್ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾಕೂಟದಲ್ಲಿ ಸಭಾಪಾಲಕ ಜಾನ್ ವೆಸ್ಲಿ ಶುಭ ಶುಕ್ರವಾರದ ಸಂದೇಶ ನೀಡಿದರು.
ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ತಾತಾ ಸೀಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನಾ ಸಭೆ ಜರುಗಿತು.
ರೆವರೆಂಡ್ ಅರುಣಕುಮಾರ ಮಾತನಾಡಿದರು.
ಅಂಬೇಡ್ಕರ್ ನಗರದ ಚರ್ಚ್: ನಗರದ ಅಂಬೇಡ್ಕರ್ ನಗರ ಬಡಾವಣೆಯಲ್ಲಿನ ಮೆಥೋಡಿಸ್ಟ್ ಚರ್ಚ್‌ನಲ್ಲಿ ಉಪವಾಸ ಪ್ರಾರ್ಥನೆ ಸಲ್ಲಿಸಲಾಯಿತು.
ಫಾದರ್ ಆರ್.ಆನಂದ ಆಶನಾಳ, ದೇವಪುತ್ರ ಮಾಳಿಕೇರಿ, ವಿಜಯಕುಮಾರ ಮಾಳಿಕೇರಿ, ಸಾಲೋಮನ್ ಹಾಲಗೇರಾ, ಮೋಹನ ಹಳ್ಳಿ,ಯಾಕೋಬ ಸಿದ್ದಿ, ಚಂದ್ರಮೋಹನ ಮ್ಯಾಗೇರಿ, ರಾಜಪ್ಪ ಮ್ಯಾಗೇರಿ, ಭಾಸ್ಕರ ಮ್ಯಾಗೇರಿ, ಆನಂದ ಮ್ಯಾಗೇರಿ, ಶಶಿ ದಾಸನ, ರಾಹುಲ್ ಮುಂಡ್ರಿಕೇರಿ, ಸಚಿನ್ ಮಾಳಿಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.