ಗುರುಮಠಕಲ್: ‘ನಮ್ಮ ಭಾಗದ ಜನರು ಮುಗ್ದರು ಮತ್ತು ಬ್ಯಾಂಕಿನ ವ್ಯವಹಾರದ ಕುರಿತು ಮಾಹಿತಿ ಕಡಿಮೆ. ಆದ್ದರಿಂದ ಬ್ಯಾಂಕಿನ ಸಿಬ್ಬಂದಿ ಜನರೊಡನೆ ಉತ್ತಮ ಒಡನಾಟದೊಂದಿಗೆ ವ್ಯವಹರಿಸಬೇಕು’ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.
ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ ಬುಧವಾರ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕು ಕೇಂದ್ರದಲ್ಲೂ ಎಚ್‌ಡಿಎಫ್‌ಸಿ ಶಾಖೆಯಿಲ್ಲ. ಆದರೆ, ಮಾಧ್ವಾರದಂಥ ಗ್ರಾಮೀಣ ಭಾಗದಲ್ಲಿ ಶಾಖೆಯನ್ನು ಆರಂಭಿಸಿದ್ದು ಸಂತಸದಾಯಕ. ಜನರು ಬ್ಯಾಂಕಿಂಗ್ ಸೇವೆಗಳ ಮತ್ತು ಸೌಲಭ್ಯಗಳ ಲಾಭ ಪಡೆಯಬೇಕು. ತಾಲ್ಲೂಕು ಕೇಂದ್ರದಲ್ಲೂ ಶಾಖೆಯನ್ನು ಆರಂಭಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳ ಕೋರಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ ಪಾಂಚಾಳ ಮಾತನಾಡಿ,‘ಮಾಧ್ವಾರ ಗ್ರಾಮದಲ್ಲಿ ಶಾಖೆ ಸ್ಥಾಪನೆಗೆ ಆರ್ಥಿಕ ವಿಭಾಗದಿಂದ ಸೂಚನೆ ಸಿಕ್ಕ ಕೂಡಲೇ ಕೇವಲ ಒಂದು ತಿಂಗಳಲ್ಲೇ ಶಾಖೆ ಪ್ರಾರಂಭಿಸಲಾಯಿತು. ಜನರು ಬ್ಯಾಂಕಿನ ಸೌಲಭ್ಯ ಮತ್ತು ಸೇವೆಗಳ ಲಾಭ ಪಡೆಯಲಿ ಎಂದು ಮನವಿ ಮಾಡಿದರು.
ಎಚ್‌ಡಿಎಫ್‌ಸಿ ಬ್ಯಾಂಕ್ ವಲಯ ಮುಖ್ಯಸ್ಥ ರವಿ ಸುರಪುರ ಮಾತನಾಡಿ,‘ನಮ್ಮದು ಅಂತರರಾಷ್ಟ್ರೀಯ ಮಟ್ಟದ ಬ್ಯಾಂಕ್ ಆಗಿದ್ದು, ನಗರ ಮತ್ತು ಗ್ರಾಮೀಣ ಭಾಗಗಳಲ್ಲೂ ಸೇವೆ ನೀಡುತ್ತಿದೆ. ನಮ್ಮಲ್ಲಿ ಆಸ್ತಿ, ಮನೆ, ಬೆಳೆ, ವ್ಯಾಪಾರ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಗ್ರಾಹಕರು ಇದರ ಲಾಭ ಪಡೆಯಬೇಕು’ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ ಕಟಕಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ, ಪಿಡಿಒ ಗಿರಿಮಲ್ಲಣ್ಣ, ಬ್ಯಾಂಕಿನ ವಲಯ ಮುಖ್ಯಸ್ಥ ರಾಮನಾರಾಯಣ, ಪ್ರಾದೇಶಿಕ ಮುಖ್ಯಸ್ಥ ಜಾರ್ಜ ಡಾಕೋಸ್ಟಾ, ಶಾಖಾ ಮುಖ್ಯಸ್ಥ ಸಂತೋಷಕುಮಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.