ADVERTISEMENT

ಶ್ರವಣ ಮೌಲ್ಯಮಾಪನ ಮತ್ತು ಭಾಷಾ ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:12 IST
Last Updated 11 ಏಪ್ರಿಲ್ 2025, 16:12 IST
ಸುಬ್ಬರಾಜು
ಸುಬ್ಬರಾಜು   

ಯಾದಗಿರಿ: ನಗರದ ನಾಯ್ಕೋಡಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏ.13ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಉಚಿತ ಶ್ರವಣ ಮೌಲ್ಯಮಾಪನ ಮತ್ತು ಭಾಷಾ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆಯ ಓಟಿಕಾನ್ ಕ್ವಿಸ್ಟ್ ಸಂಸ್ಥೆಯ ಶ್ರವಣ ತಜ್ಞ ಮತ್ತು ಭಾಷಾ ಚಿಕಿತ್ಸಕ ಸುಬ್ಬರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಮಕ್ಕಳಿಗೆ ಮತ್ತು ವೃದ್ಧರಿಗೆ ತಪಾಸಣೆ, ಚಿಕಿತ್ಸಾ ಸಲಹೆಗಳನ್ನು ನೀಡಲಾಗುವುದು. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ ಶಿಬಿರ ನಡೆಸಲಾಗುತ್ತದೆ ಎಂದರು.
ಆಟಿಸಂ, ಮಾತಿನಲ್ಲಿ ತಡಬಡಿಕೆ, ಸ್ಟ್ರೋಕ್ ಬಳಿಕದ ಪರಿಸ್ಥಿತಿ, ಶ್ವಾಸನಾಳ ಶಸ್ತ್ರಚಿಕಿತ್ಸೆ ಹೀಗೆ ವಿವಿಧ ತರಹದ ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ನಾಯ್ಕೋಡಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೂಡಿ ಕಳೆದ ಒಂದು ವರ್ಷದಲ್ಲಿ 24 ಉಚಿತ ಶ್ರವಣ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ ಎಂದ ಸುಬ್ಬರಾಜು, ಹೆಚ್ಚಿನ ಮಾಹಿತಿಗಾಗಿ 9844131035 ಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.