ADVERTISEMENT

ಯಾದಗಿರಿ: ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:42 IST
Last Updated 1 ಜನವರಿ 2026, 5:42 IST
ರಾಜ್ಯ ದಲಿತ ಸಂಘರ್ಷ ಸಮಿತಿ ವಡಗೇರಾ ತಾಲ್ಲೂಕು ಶಾಖೆ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು
ರಾಜ್ಯ ದಲಿತ ಸಂಘರ್ಷ ಸಮಿತಿ ವಡಗೇರಾ ತಾಲ್ಲೂಕು ಶಾಖೆ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು   

ವಡಗೇರಾ: ಹುಬ್ಬಳಿ ತಾಲ್ಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಾದ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಇತರರನ್ನು ಬಂಧಿಸಿದ್ದು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ನೇತೃತ್ವದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವಡಗೇರಾ ತಾಲ್ಲೂಕಾ ಶಾಖೆ ವತಿಯಿಂದ ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು.

‘ದಲಿತ ವಿವೇಕಾನಂದ ಅವರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಹಾಗೂ 4 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ದಲಿತ ಯುವಕನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂಬ ದ್ವೇಷಕ್ಕೆ 7 ತಿಂಗಳ ಗರ್ಭಿಣಿ ಮಾನ್ಯಳನ್ನು ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ಕೊಲೆ ಮಾಡಿದ್ದು, ಈ ಘಟನೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ರಾಜ್ಯದಲ್ಲಿ ಇಂತಹ ಮರ್ಯಾದೆಗೇಡು ಹತ್ಯೆಗಳು ಮರುಕಳಿಸದಂತೆ ಗಲ್ಲು ಶಿಕ್ಷೆಯಂತ ಹೊಸ ಕಾನೂನು ಸರ್ಕಾರ ಜಾರಿಗೆ ತರಬೇಕು’ ಎಂದರು.

ADVERTISEMENT

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮರೆಪ್ಪ ಕ್ರಾಂತಿ, ಬಲ ಭೀಮ ಬೇವಿನಹಳ್ಳಿ, ವಡಿಗೇರಾ ತಾಲ್ಲೂಕು ಸಂಚಾಲಕ ಭೀಮಶಂಕರ ಗುಂಡಹಳ್ಳಿ, ದೊಡ್ಡಪ್ಪ ಕಾಡಿಂಗೇರಾ, ಶರಬಣ್ಣ ದೋರನಹಳ್ಳಿ, ಮಲ್ಲು ಖಾನಾಪುರ, ನಾಗರಾಜ ಕೋಡಮ್ಮನಹಳ್ಳಿ, ಹೊನ್ನಯ್ಯ ಪೂಜಾರಿ, ದೇವರಾಜು ಗು ಡ್ಡೆನೂರು, ಶರಣು ಕೋಬಿನ್, ಸಿದ್ದಪ್ಪ ಕೋಡಮ್ಮನಹಳ್ಳಿ, ನಿಂಗು ಖಾನಾಪುರ, ಗೌತಮ್ ಖಾನಾಪುರ, ಸಣ್ಣದೇವ ಕುರುಕುಂದ, ಯಲ್ಲಪ್ಪ ಕಾಡಿಂಗೇರಾ, ಬಸವರಾಜ ದೋರನಹಳ್ಳಿ, ಮಲ್ಲಪ್ಪ ಹೊನ್ನಕ್ಕಿ, ಭೀಮಣ್ಣ ಕಾಡಿಂಗೇರಾ, ಪವನ ಪೂಜಾರಿ ಸೈದಪ್ಪ ರಾಕಾ, ಹೊನ್ನಪ್ಪ ಹಾಗೂ ಇನ್ನತಿರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.