ADVERTISEMENT

₹5ಕೋಟಿ ವೆಚ್ಚದ ಹೊಸಕೇರಾ-ವನದುರ್ಗ ಕಾಮಗಾರಿ: ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 15:34 IST
Last Updated 14 ಫೆಬ್ರುವರಿ 2025, 15:34 IST
14ಎಸ್ಎಚ್ಪಿ 2: ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದ ಬಳಿ ಶುಕ್ರವಾರ ಸೇತುವೆ ಕಾಮಗಾರಿಯನ್ನು ಸಚಿವ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು. ಸಂಸದ ಜಿ.ಕುಮಾರ ನಾಯಕ ಉಪಸ್ಥಿತರಿದ್ದರು
14ಎಸ್ಎಚ್ಪಿ 2: ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದ ಬಳಿ ಶುಕ್ರವಾರ ಸೇತುವೆ ಕಾಮಗಾರಿಯನ್ನು ಸಚಿವ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು. ಸಂಸದ ಜಿ.ಕುಮಾರ ನಾಯಕ ಉಪಸ್ಥಿತರಿದ್ದರು   

ಶಹಾಪುರ: ತಾಲ್ಲೂಕಿನ ಹೊಸಕೇರಾದಿಂದ ವನದುರ್ಗ ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವೀಕ್ಷಿಸಿದರು.

ನಂತರ ಮಾಹಿತಿ ನೀಡಿದ ಅವರು, ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹5ಕೋಟಿ ವೆಚ್ಚದಲ್ಲಿ 5.5 ಮೀಟರ್‌ವರೆಗೆ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ. ಅದರಲ್ಲಿ ರಸ್ತೆ, ಸೇತುವೆ ಒಳಗೊಂಡಿದೆ. ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ರಾಯಚೂರು ಸಂಸದ ಜಿ.ಕುಮಾರ ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸನಗೌಡ ಹೊಸಮನಿ, ಶಿವಮಹಾಂತ ಚಂದಾಪುರ, ರಾಮಣ್ಣ ಸಾದ್ಯಾಪುರ, ಅಲ್ಲಾ ಪಟೇಲ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.