ADVERTISEMENT

ಪತ್ರಕರ್ತರಿಗೆ ರೋಗ ನಿರೋಧಕ ಔಷಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:03 IST
Last Updated 2 ಜೂನ್ 2020, 16:03 IST
ಯಾದಗಿರಿ ಜಿಲ್ಲಾ ಆಯುಷ್ ಕಚೇರಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ಪತ್ರಕರ್ತರಿಗೆ ವಿತರಿಸಲಾಯಿತು
ಯಾದಗಿರಿ ಜಿಲ್ಲಾ ಆಯುಷ್ ಕಚೇರಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ಪತ್ರಕರ್ತರಿಗೆ ವಿತರಿಸಲಾಯಿತು   

ಯಾದಗಿರಿ‌: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ಮಾಧ್ಯಮದವರಿಗೆ ಜಿಲ್ಲಾ ಆಯುಷ್ ಕಚೇರಿಯಲ್ಲಿ ಮಂಗಳವಾರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಜೆ.ಗಾಳಿಯವರ್ ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಔಷಧಿಗಳನ್ನು ಮೊದಲನೆ ಹಂತದಲ್ಲಿ ಪತ್ರಕರ್ತರು ಹಾಗೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕವಿರುವ ಅಧಿಕಾರಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಡಾ.ಪ್ರಕಾಶ್ ಎಚ್.ರಾಜಾಪುರ ಹೋಮಿಯೋಪಥಿ, ಡಾ.ಪ್ರಮೋದ್ ಕುಲಕರ್ಣಿ ಆಯುರ್ವೇದ, ಡಾ.ರಾಜೇಶ್ವರಿ ಗೋನಾಳಮಠ ಯುನಾನಿ ಔಷಧಿಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ರಾಜರತ್ನ ಡಿ.ಕೆ., ಡಾ.ಸುನಂದಾ ಕುದರಿ, ಡಾ.ರಮೇಶ ಸಜ್ಜನ್, ಡಾ.ಪ್ರಮೀಳಾದೇವಿ, ರವಿಕುಮಾರ, ಮಹೇಶರೆಡ್ಡಿ, ವಿಶ್ವನಾಥ, ನಾಗರಾಜ ಇದ್ದರು. ಸಂಗಮೇಶ ಕೆಂಭಾವಿ ನಿರೂಪಿಸಿದರು.

***

ಕೊರೊನಾ ರೋಗಕ್ಕೆ ನಿಖರವಾದ ಔಷಧಿ ಇಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮಗಳೇ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಸದ್ಯದ ಪರಿಹಾರ
– ಡಾ.ವಂದನಾ ಜೆ.ಗಾಳಿಯವರ್,ಜಿಲ್ಲಾ ಆಯುಷ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.