ಯಾದಗಿರಿ: ನಗರದ ನ್ಯೂ ಕನ್ನಡ ಶಾಲೆಯ ಹತ್ತಿರ ಹಾಗೂ ಅಂಬೇಡ್ಕರ್ ಚೌಕ ಹತ್ತಿರ ಕೆಕೆಆರ್‌ಡಿಬಿಯ 2023-24ನೇ ಸಾಲಿನಲ್ಲಿ ಯೋಜನೆಯಡಿ ಅಂದಾಜು ಮೊತ್ತ (ತಲಾ ಒಂದಕ್ಕೆ) ₹15 ಲಕ್ಷಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಗಳವಾರ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ ಅವರು, ‘ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಗೆ ಅಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ಸಂಸತ್ತಿನ ಮನವೊಲಿಸಿ, 371(ಜೆ) ಕಲಂ ಜಾರಿ ಮಾಡುವ ಮೂಲಕ ಕೆಕೆಆರ್‌ಡಿಬಿಗೆ ಪ್ರತಿ ₹5000 ಅನುದಾನ ಬರುವಂತೆ ಮಾಡಿದ್ದಾರೆ’ ಎಂದರು.
‘ಅದರ ಫಲವಾಗಿ ಮಂಡಳಿಯಿಂದ ಈ ಭಾಗದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ದೊರೆಯುತ್ತಿದೆ. ಹೀಗಾಗಿ ಈ ಭಾಗದ ಶಾಸಕರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅದರ ಫಲವಾಗಿ ರಸ್ತೆ, ನೀರು, ಆರೋಗ್ಯ, ಶಿಕ್ಷಣ ಸೇರಿದಂತೆಯೇ ಮೂಲಭೂತ ಸೌಲಭ್ಯಗಳು ನೀಡಲಾಗುತ್ತಿದೆ’ ಎಂದು ಶಾಸಕರು ವಿವರಿಸಿದರು.
‘ನಗರದಲ್ಲಿ ಕೆಟ್ಟಿರುವ ಆರ್‌ಒ ಪ್ಲಾಂಟ್‌ಗಳ ದುರಸ್ತಿಗೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ನಗರಸಭೆ ಸದಸ್ಯರಾದ ವಿಜಯಲಕ್ಷ್ಮೀ ಕೃಷ್ಟ ನಾನೇಕ, ಮಹೇಶ ಕುರಕುಂಬಳ, ಗೋಪಾಲ ಗಿರಿಯಪ್ಪನೋರ್, ಶಿವಕುಮಾರ ಕರದಳ್ಳಿ, ಕಾರ್ಯಪಾಲಕ ಎಂಜಿನಿಯರ್ ಧನಂಜಯ್ಯ ಆರ್., ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವರಾಜ ಹುಡೇದ, ಸೂಗುರೆಡ್ಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.