ADVERTISEMENT

ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಮುದ್ನಾಳ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:34 IST
Last Updated 28 ಜನವರಿ 2026, 6:34 IST
ಯಾದಗಿರಿ ನಗರದ ವೀರನಿಕೇತನ ರಡ್ಡಿಸಾಬ್ ಗೋದಾಮ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಯಾದಗಿರಿ ನಗರದ ವೀರನಿಕೇತನ ರಡ್ಡಿಸಾಬ್ ಗೋದಾಮ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.   

ಯಾದಗಿರಿ: ‘ನಮ್ಮದು ವಿಭಿನ್ನತೆಯಲ್ಲಿ ಏಕತೆ ಸಾರುವ ದೇಶ. ದೇಶದ ಸಮಗ್ರತೆ, ಸಾಮಾಜಿಕ ನ್ಯಾಯ ಹಾಗೂ ಎಲ್ಲ ವರ್ಗಗಳಿಗ ಆಶೋತ್ತರಗಳನ್ನು ಕಾಪಾಡುವ ಸಂವಿಧಾನವನ್ನು ರಚಿಸುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅವರು ರಚಿಸಿರುವ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ’ ಎಂದು ಬಿಜೆಪಿ ಮುಖಂಡ ಮಹೇಶರಡ್ಡಿ ಮುದ್ನಾಳ ಹೇಳಿದರು.

ನಗರದ ವೀರನಿಕೇತನ ರಡ್ಡಿಸಾಬ್ ಗೋದಾಮ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳು ಸಂವಿಧಾನದ ಮೂಲ ಆಶಯ. ದೇಶದ ಪ್ರತಿಯೊಬ್ಬರಿಗೂ ಸಮಾನತೆ, ಸಹಬಾಳ್ವೆಯ ಅವಕಾಶ ದೊರೆಯಲತ್ತಿರುವುದು ಸಂವಿಧಾನದ ಮಹತ್ವ. ಅದು ದೇಶದ ಆಡಳಿತಯಂತ್ರ ಸುಗಮವಾಗಿ ಸಾಗಲು ಅನುಕೂಲವಾಗಿದೆ’ ಎಂದರು.

ಮುಖಂಡರಾದ ಅಯ್ಯಣ್ಣ ಹುಂಡೇಕಾರ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಖಂಡಪ್ಪ ದಾಸನ್, ವಿಲಾಸ ಪಾಟೀಲ, ಲಿಂಗಪ್ಪ ಹತ್ತಿಮನಿ, ಡಾ.ಶರಣಗೌಡ ಕೊಡ್ಲಾ, ಸುರೇಶ ಆಕಳ, ನಾಗರಾಜ ಬೀರನೂರ, ರಾಜಶೇಖರಯ್ಯ ಸ್ವಾಮಿ, ಶರಣಗೌಡ ಅಲ್ಲಿಪೂರ, ಬಸವರಾಜ ಮೋಟ್ನಳ್ಳಿ, ಪ್ರಭಾವತಿ ಮಾರುತಿ ಕಲಾಲ್, ಅಬ್ದುಲ್ ವಾಬ್, ಸ್ವಾಮಿದೇವ ದಾಸನಕೇರಿ, ಲಕ್ಷೀಪುತ್ರ ಮಾಲಿಪಾಟೀಲ, ಗೋಪಾಲ ದಾಸನಕೇರಿ, ಮಂಜು ಜಡಿ, ಪವನ ಲಿಂಗೇರಿ, ಬಂದೇನವಾಜ, ಶಾಂತಗೌಡ ಪಗಲಾಪೂರ, ವೀಣಾ ಮೋದಿ, ಅನೀಲ್ ಕರಾಟೆ, ಸಿದ್ದಲಿಂಗಪ್ಪ ನಾಯಕ, ನಾಗಪ್ಪ ಬೆನಕಲ್, ಮಲ್ಲಿಕಾರ್ಜುನ ಕಟ್ಟಿಮನಿ, ಮಾರಪ್ಪ ವರ್ಕನಳ್ಳಿ, ರಾಜೇಂದ್ರ ಗಾಂಧಿ, ಮಹಾದೇವಪ್ಪ ಗಣಪೂರ, ನೀಲಕಂಠ ಶೀಲವಂತ, ಇರ್ಫಾನ್ ಚಾವುಸ್, ಸುಭಾಷ ಮಾಳಿಕೇರಿ, ಶಿವಣ್ಣ ಬಡಿಗೇರ, ಸುಭಾಷ್ ಅತ್ತುತ್ತಿ, ಹಣಮಂತ ವಲ್ಲಾಪೂರೆ, ಶಿವಕುಮಾರ ಅರುಣಿ, ಚೆನ್ನಯ್ಯ ಮಾಳಿಕೇರಿ, ಶ್ರೀಕಾಂತ ಸುಂಗಲಕರ್ ಉಪಸ್ಥಿತರಿದ್ದರು.

ADVERTISEMENT