ಭೂಸೇನಾದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಅಲ್ಲೂರ್ (ಕೆ) ಅವರನ್ನು ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೋಡಲಾಯಿತು
ಯಾದಗಿರಿ: ಕೆಲ ದಿನಗಳ ಹಿಂದೆ ಮೃತಪಟ್ಟ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸ್ವಗ್ರಾಮಕ್ಕೆ ಆಗಮಿಸಿದ್ದ, ಭೂಸೇನಾದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಅಲ್ಲೂರ್ (ಕೆ) ಅವರಿಗೆ ಮೇಲಾಧಿಕಾರಿಗಳ ತುರ್ತು ಕರೆ ಬಂದ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಭಾನುವಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತೆರಳುತ್ತಿರುವ ಅವರನ್ನು ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಮಾಲಿ ಪಾಟೀಲ ಹಾಗೂ ಗ್ರಾಮಸ್ಥರು ಅವರ ನಿವಾಸದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೋಟ್ಟರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅಲ್ಲೂರ್ (ಕೆ), ಗ್ರಾಮದ ಯುವ ಸೈನಿಕರಾಗಿರುವ ಬಸವರಾಜ ಕೊರಳ್ಳಿ ಅವರು ಜಮ್ಮು ಮತ್ತು ಕಾಶ್ಮೀರದ ಉದಂಪುರ ಜಿಲ್ಲೆಯಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಹತ್ತಿಕುಣಿ ಗ್ರಾಮದವರಾಗಿದ್ದು, ಕರ್ತವ್ಯಕ್ಕೆ ತೆರಳುವ ಮೊದಲು ಬಂದು ಬಳಗದವರನ್ನು ಭೇಟಿಯಾಗಲು ಹತ್ತಿಕುಣಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಅವರಿಗೆ ಶುಭಕೋರಿದರು.
ಸೈನಿಕನನ್ನು ಸನ್ಮಾನಿಸಿ ಮಾತನಾಡಿದ ಮಲ್ಲಣ್ಣಗೌಡ ಪಾಟೀಲ ಹತ್ತಿಕುಣಿ, ದೇಶದ ಸೈನ್ಯದಲ್ಲಿ ಕೆಲಸ ಮಾಡುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ನಮ್ಮ ಗ್ರಾಮದ ಮೊಮ್ಮಗನಾಗಿರುವ ಬಸವರಾಜ ಕೊರಳ್ಳಿ ಅವರು ದೇಶದ
ಶಕ್ತಿಶಾಲಿಯಾಗಿರುವ ಭೂ ಸೇನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಪಾಕಿಸ್ತಾನ ಗಡಿ ಭಾಗದ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು 13 ವರ್ಷಗಳಿಂದ ಕೆಲಸ ಮಾಡಿ ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು.
ಈ ಕದನದಲ್ಲಿ ಈಗಾಗಲೇ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ದ ದೇಶ ಮೇಲುಗೈಯ ಸಾಧಿಸಿದ್ದಾರೆ. ಪ್ರತಿಯೊಬ್ಬ ಸೈನಿಕನ ಸೇವೆ ದೇಶಕ್ಕೆ ಅವಶ್ಯಕವಾಗಿದೆ. ದೇಶ ಈ ಕದನದಲ್ಲಿ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿ ಹಿನಾಯವಾಗಿ ಸೋಲಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಮೃತರೆಡ್ಡಿ ಪಾಟೀಲ, ಮಲ್ಲರೆಡ್ಡಿಗೌಡ ಮಾಲಿ ಪಾಟೀಲ, ಚಂದ್ರಾರೆಡ್ಡಿ ದಳಪತಿ, ಮಲ್ಲಿಕಾರ್ಜುನ ಗೌಡಗೇರಾ, ಯಂಕಾರೆಡ್ಡಿ ಜಟ್ಟೂರ್, ದೇವಿಂದ್ರಪ್ಪ ಖಂಡಪ್ಪನೋರ್, ರವಿ ಪಾಟೀಲ, ಹಣಮಂತ ಶಂಕ್ರಪ್ಪನೋರ್, ಸಿದ್ದು ನಾಯಕ, ಮಂಜುನಾಥರೆಡ್ಡಿ ಗಡೇದ, ನರಸಪ್ಪ ಭೀಮನಳ್ಳಿ, ಕ್ಷೀರಲಿಂಗ ಗಣಪುರ, ಶಿವಶರಣಪ್ಪ ನಿಶಾನಿ, ಸುಭಾಷ ನಾಯಕ, ಯಂಕಾರೆಡ್ಡಿ ಕೊಳ್ಳಿ, ಬಸಣ್ಣಗೌಡ ಮಾಲಿಪಾಟೀಲ, ಕಮಲರೆಡ್ಡಿ ಬೂದಿ, ಶರಣು ಗಡೇದ, ಸಾಹೇಬಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ ಖಂಡಪ್ಪನೋರ, ಯಂಕಾರೆಡ್ಡಿ ರಾಂಪೂರಳ್ಳಿ, ರಾಮಯ್ಯ ಕಲ್ಲಪ್ಪನೋರ್, ದೇವಪ್ಪ ಕವಲ್ದಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.