ಯಾದಗಿರಿ: ತಾಲ್ಲೂಕಿನ ಹೊನಗೇರಾ ಗ್ರಾಮದಲ್ಲಿ ರುಚಿ ಟ್ರಸ್ಟ್ ವತಿಯಿಂದ ಕೌಶಲಾಭಿವೃದ್ಧಿ ಮತ್ತು ಟೇಲರಿಂಗ್ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳು ಟೇಲರಿಂಗ್ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ರುಚಿ ಟ್ರಸ್ಟ್ ಕಾರ್ಯದರ್ಶಿ ಶ್ವೇತಾ ಆರ್.ಚಿಕ್ಕಮಠ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳುವ ಛಲ ಹೊಂದಿರಬೇಕು. ರುಚಿ ಟ್ರಸ್ಟ್ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರಿಗಾಗಿ ಮಹಿಳಾ ಕೌಶಲಾಭಿವೃದ್ಧಿ ಮತ್ತು ಟೇಲರಿಂಗ್ ತರಬೇತಿ ಕೇಂದ್ರ ತೆರೆಯುವ ಮೂಲಕ ಕೌಶಲ ಸಾಮಾರ್ಥ್ಯ ಪಡೆಯುವಂತೆ ಟೇಲರಿಂಗ್ ತರಬೇತಿ ನೀಡುವ ಮೂಲಕ ಕಾರ್ಯೋನ್ಮುಖವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರುಚಿ ಟ್ರಸ್ಟ್‌ನ ಟೇಲರಿಂಗ್ ತರಬೇತಿ ಕೇಂದ್ರದ ಮೂಲಕ ಮಹಿಳಾ ಅಭ್ಯರ್ಥಿಗಳು ತರಬೇತಿ ಪಡೆದುಕೊಂಡು ವಿವಿಧ ಬಗೆಯ ಉಡುಪುಗಳ ತಯಾರಿಕೆಯಲ್ಲಿ ನೈಪುಣ್ಯತೆ ಪಡೆದಿರುವ ಕಾರ್ಯಕ್ಕೆ ಪಾಲಕ, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತರಬೇತಿ ಪೂರೈಸಿದ ಅಭ್ಯರ್ಥಿಗಳಾದ ಭಾಗ್ಯಶ್ರೀ, ರೇಣುಕಾ ಹಾಗೂ ರಾಧಾ ಸೇರಿದಂತೆ ಅನೇಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.