ADVERTISEMENT

ಯರಗೋಳ: ‘ರಚನಾತ್ಮಕ ಚಟುವಟಿಕೆಗೆ ಸಹಾಯ’: ಅಮೃತಾಬಾಯಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:32 IST
Last Updated 1 ಫೆಬ್ರುವರಿ 2023, 5:32 IST
ಯರಗೋಳ ಸಮೀಪದ ಅಲ್ಲಿಪುರ ಗ್ರಾಮದಲ್ಲಿ ಕಲಿಕಾ ಹಬ್ಬ ಜರುಗಿತು
ಯರಗೋಳ ಸಮೀಪದ ಅಲ್ಲಿಪುರ ಗ್ರಾಮದಲ್ಲಿ ಕಲಿಕಾ ಹಬ್ಬ ಜರುಗಿತು   

ಯರಗೋಳ: ‘ಕಲಿಕಾ ಚೇತರಿಕೆ ಪುನಶ್ಚೇತನ ಭಾಗವಾಗಿ ಕಲಿಕಾ ಹಬ್ಬ ಮಾಡಲಾಗುತ್ತಿದೆ. ಮಕ್ಕಳು ಸಂತಸದಿಂದ ರಚನಾತ್ಮಕವಾಗಿ ತೊಡಗಿಸಿಕೊಂಡು ಕಲಿಯುವ ಹಬ್ಬ ಇದಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತಾಬಾಯಿ ಜಾಗಿರದಾರ್ ಹೇಳಿದರು.

ಅಲ್ಲಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿಲಾದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಡಾ. ಯೋಗೇಶ್ ಬೆಸ್ತರ್ ಸೊಸಿಯಲ್ ವಲ್ಫೇರ್ ಟ್ರಸ್ಟ್‌ನಿಂದ ₹10 ಸಾವಿರ ದೇಣಿಗೆ ನೀಡಿ ಶುಭ ಹಾರೈಸಿದರು.

ವೆಂಕಟೇಶ್ವರ ದೇವಸ್ಥಾನ ಸಮಿತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾರಾಣಿ ಅವರಿಂದ ಸಿಹಿ ಊಟ, ಅಜೀಂ ಪ್ರೇಮ್ ಜೀ ಫೌಂಡೇಶನ್ ಮತ್ತು ಕಲಿಕಾ ಟಾಟಾ ಟ್ರಸ್ಟ್ ವತಿಯಿಂದ ಕಲಿಕಾ ಸಾಮಗ್ರಿ ನೆರವು, ಗ್ರಾಮ ಪಂಚಾಯಿತಿ ಉಪಾದ್ಯಕ್ಷ ರಾಮು 75 ಕೆಜಿ ಅಕ್ಕಿ , ಕಂಚಗಾರಹಳ್ಳಿ ಪಂಚಾಯಿತಿ ಸದಸ್ಯ ಹಣಮಂತ 50 ಕಿ.ಜಿ ಅಕ್ಕಿ ದೇಣಿಗೆ ನೀಡಿದರು.

ADVERTISEMENT

ರವೀಂದ್ರ ಡಮ್ಮಣ್ಣ, ಶ್ರೀದೇವಿ, ನಾಗರತ್ನ, ಚಂದ್ರಕಾಂತ, ಸಜ್ಜನ್ ಶೆಟ್ಟರ್, ಅಯ್ಯಣ್ಣ ಬಡಿಗೇರ, ಮುನೀರ್ ಅಹ್ಮದ್ ಬೆಂಕಿಪುರ, ಯಲ್ಲಪ್ಪ, ಕನಕಪ್ಪ, ಸಿದ್ದಲಿಂಗಪ್ಪ, ಮಲ್ಲಿಕಾರ್ಜುನ ಬಾಲಮ್ಮ, ಪ್ರೇಮಲತಾ, ಮೌನೇಶ್ವರಿ, ಹಣಮಂತಿ, ಪದ್ಮಾವತಿ, ಗರುಲಿಂಗಮ್ಮ, ಈರಣ್ಣ ಭಜಂತ್ರಿ, ಸುಮಂಗಲಾ, ಷಾಕೀರ್ ಹುಸೇನ್, ನಾಗರಡ್ಡಿ, ಕೃಷ್ಣ , ಶಿವಯೋಗಿ, ದೇವಪ್ಪ, ಹಣಮಂತ, ವಿನೋದ್ ದೊಡ್ಮನಿ, ಬಂಗಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.