ADVERTISEMENT

‘ಹಿಂದುಳಿದ’ ಹಣೆಪಟ್ಟಿ ಕಳಚಲು ಶ್ರಮಿಸಿ

ಶಹಾಪುರ: ತಹಶೀಲ್ದಾರ್ ಮಧುರಾಜ ಕೂಡ್ಲೂಗಿ ಕರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 4:00 IST
Last Updated 18 ಸೆಪ್ಟೆಂಬರ್ 2021, 4:00 IST
ಶಹಾಪುರ ಸಿಪಿಎಸ್ ಶಾಲಾ ಮೈದಾನದ ಆವರಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಮಧುರಾಜ ಕೂಡ್ಲಿಗಿ ಮಾತನಾಡಿದರು. ನಗರಸಭೆ ಸದಸ್ಯರಾದ ಶಿವಕುಮಾರ ತಳವಾರ, ಬಸವರಾಜ ತಳವಾರ, ಶಹನಾಜ್ ಬೇಗಂ, ನೌಕರ ಸಂಘದ ಅಧ್ಯಕ್ಷ ರಾಯಪ್ಪ ಹುಡೇದ ಇದ್ದರು
ಶಹಾಪುರ ಸಿಪಿಎಸ್ ಶಾಲಾ ಮೈದಾನದ ಆವರಣದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಮಧುರಾಜ ಕೂಡ್ಲಿಗಿ ಮಾತನಾಡಿದರು. ನಗರಸಭೆ ಸದಸ್ಯರಾದ ಶಿವಕುಮಾರ ತಳವಾರ, ಬಸವರಾಜ ತಳವಾರ, ಶಹನಾಜ್ ಬೇಗಂ, ನೌಕರ ಸಂಘದ ಅಧ್ಯಕ್ಷ ರಾಯಪ್ಪ ಹುಡೇದ ಇದ್ದರು   

ಶಹಾಪುರ: ನಿಜಾಮರ ಆಳ್ವಿಕೆಯ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯಿ ಪಟೇಲ್ ಅಹಿಂಸಾತ್ಮಕ ಹೋರಾಟದ ಫಲವಾಗಿ 6 ಜಿಲ್ಲೆಗಳ ಜನತೆಗೆ ತಡವಾಗಿ ಸ್ವಾತಂತ್ರ್ಯ ಲಭಿಸಿದರ ಫಲವಾಗಿ ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದ್ದೇವೆ ಎಂದು ತಹಶೀಲ್ದಾರ್ ಮಧುರಾಜ ಕೂಡ್ಲೂಗಿ ತಿಳಿಸಿದ್ದಾರೆ.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

ಉಪನ್ಯಾಸಕ ಭೀಮಣ್ಣ ಅಂಚೆಸೂಗೂರ ಉಪನ್ಯಾಸ ನೀಡುತ್ತಾ, ಹಲವಾರು ಬದಲಾವಣೆಗಳೊಂದಿಗೆ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಇನ್ನೂ ಶೈಕ್ಷಣಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಉನ್ನತಿಯನ್ನು ಸಾಧಿಸುತ್ತಿಲ್ಲ. ನೀರಾವರಿ ಪ್ರದೇಶವನ್ನು ಒಳಗೊಂಡು ಆರ್ಥಿಕವಾಗಿ ಬದುಕಿನಲ್ಲಿ ತುಸು ಹಸಿರು ಕಂಡಿದ್ದೇವೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೌಲಸೌಲಭ್ಯಗಳನ್ನು ಒದಗಿಸಬೇಕು. ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಿತ್ತಿ ಹಾಕಿ ಪ್ರಗತಿಯನ್ನು ಸಾಧಿಸಲು ಪಣ ತೊಡಬೇಕು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರ ಜಗನಾಥಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸೂರ್ಯವಂಶಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಿಲ್ಲಾಳ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಹುತಪ್ಪ ಹವಾಲ್ದಾರ ಇದ್ದರು.

ನಗರ ಯೋಜನಾ ಪ್ರಾಧಿಕಾರ: ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣವನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ನೆರವೇರಿಸಿದರು. ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ನಂದಣ್ಣ ಮೂಡಬೂಳ, ಶರಣಪ್ಪ ಮುಂಡಾಸ್, ರಾಜು ಪಂಚಭಾವಿ, ಸಿದ್ದಯ್ಯಸ್ವಾಮಿ ಹಿರೇಮಠ, ಮುರಳೀ ಧರ ಕುಲಕರ್ಣಿ, ಗಿರಿಜಮ್ಮ, ನಾಗಮ್ಮ ಸಿದ್ದಯ್ಯ, ಸೋಪಣ್ಣ ಸಗರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.