
ಸುರಪುರ: ‘ತಾಲ್ಲೂಕಿನ ಎಲ್ಲಾ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಬ್ಯಾನರ್, ಪೋಸ್ಟರ್, ಸ್ಕ್ರೀನ್ ಪರದೆಗಳಲ್ಲಿ ಶೇ 60ರಷ್ಟು ಕನ್ನಡ ಪದ ಬಳಕೆ ಮಾಡಲು ತಕ್ಷಣವೇ ಆದೇಶಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಗುರುವಾರ ಬಿಇಒ ಯಲ್ಲಪ್ಪ ಕಾಡ್ಲೂರು ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು. ‘ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುತೇಕ ಶಾಲೆಯವರು ಬ್ಯಾನರ್, ಪೋಸ್ಟರ್, ಸ್ಕ್ರೀನ್ ಪರದೆಗಳಲ್ಲಿ ಇಂಗ್ಲೀಷ್ ಪದಗಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ದೂರಿದರು.
ಉಪಾಧ್ಯಕ್ಷ ನಾಗೇಂದ್ರ ದೊರೆ, ಸಂಚಾಲಕ ಮಲ್ಲಿಕಾರ್ಜುನ ರೊಡ್ಡರ, ವಿವಿಧ ಗ್ರಾಮ ಶಾಖೆಯ ಪದಾಧಿಕಾರಿಗಳಾದ ರಘುವೀರ ದೇಸಾಯಿ, ಶಿವು ಸಾಹುಕಾರ, ರಾಮುಲು ಬೇವಿನಾಳ, ಅಶೋಕ ನಾಯಕ, ಬಲಭೀಮ ಬಾದ್ಯಾಪುರ, ಮೌನೇಶ ಬಡಿಗೇರ, ಮಹಾರಾಜ ಹೆಮ್ಮಡಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.