ADVERTISEMENT

ಹಜರತ್ ಮನಸೂರ ಅಲಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:57 IST
Last Updated 20 ನವೆಂಬರ್ 2025, 6:57 IST
ಶಹಾಪುರ ತಾಲ್ಲೂಕಿನ ಮಕ್ತಾಪೂರ ಗ್ರಾಮದಲ್ಲಿ ಬುಧವಾರ ಹಜರತ್ ಮನಸೂರ ಅಲಿ ಜಾತ್ರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು
ಶಹಾಪುರ ತಾಲ್ಲೂಕಿನ ಮಕ್ತಾಪೂರ ಗ್ರಾಮದಲ್ಲಿ ಬುಧವಾರ ಹಜರತ್ ಮನಸೂರ ಅಲಿ ಜಾತ್ರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು   

ಶಹಾಪುರ: ತಾಲ್ಲೂಕಿನ ಮಕ್ತಾಪೂರ ಗ್ರಾಮದಲ್ಲಿ ಹಜರತ ಮನಸೂರ ಅಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಗ್ರಾಮದ ಕುಸ್ತಿ ಪಟುಗಳು ಅಲ್ಲದೆ ನೆರೆ ಜಿಲ್ಲೆಯ ಕುಸ್ತಿ ಪಟುಗಳು ಆಗಮಿಸಿದ್ದರು. ಪಂದ್ಯಾವಳಿಯಲ್ಲಿ ಅಖಾಡಕ್ಕೆ ಇಳಿದು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದರು.

ಪ್ರತಿಸ್ಪರ್ಧಿಗಳು ಸಿಂದಗಿ ಸಂಗೋಗಿ ಕುಮಚಗಿ ಜತೆ ಸೆಣಸಾಡಲು ಮುಂದೆ ಬರದ ಕಾರಣ ಸಂಗೋಗಿ ವಿಜಯಿ ಎಂದು ಘೋಷಣೆ ಮಾಡಿ 5 ಗ್ರಾಂ ಬೆಳ್ಳಿ ಕಡಗ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಮುಖಂಡರಾದ ಮನಸೂರ ಪಟೇಲ್, ಅಲ್ಲಾ ಪಟೇಲ್ ಮಕ್ತಾಪುರ, ಅನಸರ ಪಟೇಲ, ಮರ್ದನ ಪಟೇಲ, ಧರ್ಮಣ್ಣ ಪೂಜಾರಿ, ಶಂಕ್ರಪ್ಪ ದೋರನಹಳ್ಳಿ, ಹುಚ್ಚಪ್ಪ ದೋರನಹಳ್ಳಿ, ಮಹರಾಜ ಮಕ್ತಾಪುರ, ಸಿದ್ದಪ್ಪ ಪರಮೇಶ್ವರ, ಮರೆಪ್ಪ ಇಬ್ರಾಹಿಂಪೂರ, ಮುತ್ತಪ್ಪ ಅರಿಕೇರಿ, ಭೀಮಪ್ಪ ಬಡಿಗೇರ, ಮಲ್ಲಯ್ಯ ಸ್ವಾಮಿ, ಮಾನಪ್ಪ ದೊರಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.