ವಡಗೇರಾ: ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಹಾಪುರ ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಯಾದಗಿರಿ ಮಾರ್ಗವಾಗಿ ಪ್ರಯಾಣಿಸಲಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ.
ಇಲ್ಲಿನ ಹಳೆ ಬಸ್‌ನಿಲ್ದಾಣದಿಂದ ವಡಗೇರಾ ಕ್ರಾಸ್‌ವರೆಗೆ ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಗುಂಡಿಗಳನ್ನು ಸಣ್ಣ ಜಲ್ಲಿಕಲ್ಲು ಹಾಗೂ ಒಣ ಸಿಮೆಂಟ್ ಹಾಕಿ, ಮುಚ್ಚುತಿದ್ದಾರೆ.
ಸತತ ಮಳೆಯಿಂದಾಗಿ ಉಂಟಾಗಿದ್ದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಹನ ಚಾಲಕರು ಹಾಗೂ ಸವಾರರಿಗೆ ತೊಂದರೆಯಾಗಿತ್ತು. ಆದರೆ ಲೋಕೋಪಯೋಗಿ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಂಡಿರಲಿಲ್ಲ. ಈಗ ಸಚಿವರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಕಾಟಾಚಾರದಿಂದ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಜಲ್ಲಿಕಲ್ಲು ಹಾಗೂ ಸಿಮೆಂಟಿ ಒಣ ಪುಡಿಯನ್ನು ಬಳಸಿದ್ದು, ದೂಳು ಬರುತ್ತಿದೆ. ಅದರ ಬದಲಿಗೆ ಡಾಂಬರು ಹಾಕಿ, ಶಾಶ್ವತವಾಗಿ ಗುಂಡಿಗಳನ್ನು ಮುಚ್ಚಿದ್ದರೆ ಅನುಕೂಲವಾಗುತ್ತಿತ್ತು’ ಎಂದು ದ್ವಿಚಕ್ರ ವಾಹನ ಸವಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.