ADVERTISEMENT

ಪ್ರತಿಭೆ ಗುರುತಿಸಲು ಪ್ರೋತ್ಸಾಹಿಸುವೆ: ಶಾಸಕ ರಾಜಾ ವೇಣುಗೋಪಾಲನಾಯಕ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:18 IST
Last Updated 29 ಡಿಸೆಂಬರ್ 2025, 6:18 IST
ಸುರಪುರ ಸಮೀಪದ ನರಸಿಂಗನಪೇಟೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪಡೆದ ಹಣಮಂತ ಈರಗೋಟ ದಂಪತಿಯನ್ನು ಭಾನುವಾರ ಸನ್ಮಾನಿಸಲಾಯಿತು
ಸುರಪುರ ಸಮೀಪದ ನರಸಿಂಗನಪೇಟೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪಡೆದ ಹಣಮಂತ ಈರಗೋಟ ದಂಪತಿಯನ್ನು ಭಾನುವಾರ ಸನ್ಮಾನಿಸಲಾಯಿತು   

ಸುರಪುರ: ‘ನಮ್ಮ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ಎಲೆಮರೆ ಕಾಯಿಯಂತೆ ಇವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ಸಮೀಪದ ನರಸಿಂಗನಪೇಟೆಯಲ್ಲಿ ಪ್ರಸ್ತುತ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪಡೆದ ಹಣಮಂತ ಈರಗೋಟ ಅವರನ್ನು ಭಾನುವಾರ ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಮಾತನಾಡಿ, ‘ನರಸಿಂಗನಪೇಟೆಗೆ ಜಾನಪದದ ಹಿನ್ನೆಲೆ ಇದೆ. ಇಲ್ಲಿ ಭಜನೆ, ರಿವಾಯತ್, ಗೀಗೀ ಪದಗಳ ಕಲಾವಿದರು. ಹಾಸುಹೊಕ್ಕಾಗಿದ್ದಾರೆ. ತಮ್ಮ ಇಡೀ ಜೀವನವನ್ನು ಜಾನಪದಕ್ಕೆ ಮೀಸಲಿಟ್ಟ ಹಣಮಂತ ಅನನ್ಯ ಕಲಾವಿದ’ ಎಂದರು.

ADVERTISEMENT

ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ‘ಈಚೆಗೆ ಈ ಭಾಗದ ಕಲಾವಿದರಿಗೆ ವಿವಿಧ ಪ್ರಶಸ್ತಿಗಳು ದೊರಕುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಇಲ್ಲಿನ ದೇಸಿ ಕಲೆ ಉಳಿಯುತ್ತದೆ’ ಎಂದರು.

ಕುಂಬಾರಪೇಟೆಯ ಶರಣಯ್ಯ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಜಾನಪದ ಅಕಾಡೆಮಿ ಸದಸ್ಯ ಶಿವಮೂರ್ತಿ ತನಿಖೆದಾರ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ನಿಂಗರಾಜ ಬಾಚಿಮಟ್ಟಿ, ಜುಮ್ಮಣ್ಣ ಕೆಂಗೂರಿ, ರಂಗನಗೌಡ ದೇವಿಕೇರಿ, ಅಬ್ದುಲ ಗಫಾರ್ ನಗನೂರಿ, ಭೀರಲಿಂಗ ಬಾದ್ಯಾಪುರ, ಶರಣು ಮುಧೋಳ, ಸೂಗಪ್ಪ ಗೊಬ್ಬೂರ, ಶರಣಪ್ಪ ಹಂಗರಗಿ ಭಾಗವಹಿಸಿದ್ದರು.
ಬಸವರಾಜ ತನಿಖೆದಾರ ಸ್ವಾಗತಿಸಿದರು. ಬಸವಣ್ಣಪ್ಪ ಹಂಗರಗಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.