ADVERTISEMENT

ಶಾಸಕ ರಾಜೂಗೌಡಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:24 IST
Last Updated 22 ಜನವರಿ 2022, 4:24 IST
ರಾಜೂಗೌಡ
ರಾಜೂಗೌಡ   

ಸುರಪುರ: ಶಾಸಕ ರಾಜೂಗೌಡಗೆ ಶುಕ್ರ ವಾರ ಕೋವಿಡ್ ದೃಢಪಟ್ಟಿದೆ.

‘ಕಳೆದ ಎರಡು ದಿನಗ ಳಿಂದ ಜ್ವರದಿಂದ ಬಳಲುತ್ತಿದ್ದೇನೆ. ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟಿತು. ಸೌಮ್ಯ ಲಕ್ಷಣಗಳಿವೆ. ಬೆಂಗಳೂರಿನ ನಿವಾಸದಲ್ಲಿ ಹೋಮ್‌ ಐಸೋಲೇಷನ್‌ನಲ್ಲಿದ್ದೇನೆ’ ಎಂದು ರಾಜೂಗೌಡ ತಿಳಿಸಿದರು. ‘ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಕ್ಷೇತ್ರದಲ್ಲಿ ನನ್ನ ಕೆಲಸಗಳನ್ನು ಆಪ್ತ ಸಹಾಯಕರು ಮತ್ತು ಮುಖಂಡರು ನೋಡಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಗುಣಮುಖನಾಗಿ ಸೇವೆಗೆ ಹಾಜರಾಗಲಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT