ADVERTISEMENT

ಪ್ರಜಾವಾಣಿ ಫಲಶ್ರುತಿ | ಅಪ್‌ಡೇಟ್ ಆಯ್ತು ಯಾದಗಿರಿ ನಗರಸಭೆ ವೆಬ್‌ಸೈಟ್

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತ ನಗರಸಭೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 5:48 IST
Last Updated 17 ಅಕ್ಟೋಬರ್ 2019, 5:48 IST
ಯಾದಗಿರಿ ನಗರಸಭೆಯ ಜಾಲತಾಣದಲ್ಲಿ ಸಚಿವರ, ಸಂಸದರ ಫೋಟೋ ಮತ್ತು ವಿಳಾಸ ಬದಲಾವಣೆಯಾಗಿದೆ
ಯಾದಗಿರಿ ನಗರಸಭೆಯ ಜಾಲತಾಣದಲ್ಲಿ ಸಚಿವರ, ಸಂಸದರ ಫೋಟೋ ಮತ್ತು ವಿಳಾಸ ಬದಲಾವಣೆಯಾಗಿದೆ   

ಯಾದಗಿರಿ: ನಗರದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕಾದ ನಗರಸಭೆ ಸಿಬ್ಬಂದಿ ಕಳೆದ ಮೂರು ತಿಂಗಳಿಂದಲೂ ವೆಬ್‌ಸೈಟ್‌ ಅಪ್ಡೇಟ್‌ ಮಾಡದ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ನಗರಸಭೆಜಾಲತಾಣವನ್ನು ಅಪ್‌ಡೇಟ್ ಮಾಡಿದೆ.

www.yadgircity.mrc.gov.in ವೈಬ್‌ಸೈಟ್‌ನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಜಶೇಖರ ಪಾಟೀಲ ಅವರ ಹೆಸರು ಹೊಸ ಸರ್ಕಾರ ಬಂದಿದ್ದರೂ ನವೀಕರಣವಾಗಿರಲಿಲ್ಲ. ಅಲ್ಲದೆರಾಯಚೂರು ಕ್ಷೇತ್ರದ ಸಂಸದರ ಹೆಸರು ಬಿಟ್ಟರೆ ವಿಳಾಸ, ಫೋಟೋ ನವೀಕರಣ ಮಾಡಿರಲಿಲ್ಲ. ಇದರಿಂದ ತಪ್ಪು ಸಂದೇಶ ನೀಡುವಂತಾಗಿತ್ತು. ಬುಧವಾರದ ಸಂಚಿಕೆಯಲ್ಲಿ ‘ಅಪ್ಡೇಟ್‌ ಆಗದ ನಗರಸಭೆ ಜಾಲತಾಣ’ ದ ಬಗ್ಗೆ ವರದಿ ಪ್ರಕಟವಾಗಿತ್ತು. ಇದರಿಂದ ನಗರಸಭೆ ಸಿಬ್ಬಂದಿ ಎಚ್ಚೆತ್ತು ಜಾಲತಾಣದಲ್ಲಿ ಸಚಿವ, ಸಂಸದರ ಹೆಸರು ಬದಲಾವಣೆ ಮಾಡಲಾಗಿದೆ.

ಈಗಪಸು ಸಂಗೋಪನಾ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ರಾಯಚೂರು ಸಂಸದ ರಾಜ ಅಮರೇಶ್ವರ ನಾಯಕ ಅವರ ಫೋಟೊ ಮತ್ತು ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಸೇರ್ಪಡೆಮಾಡಲಾಗಿದೆ.

ADVERTISEMENT

ಈಗಈ ಪುಟವನ್ನು ದ್ವಿತಿಯ ದರ್ಜೆ ಸಹಾಯಕ ರವಿ.ಕೆ., ಮೊ.ಸಂ.99450 76720 ಇವರು ನಿರ್ವಹಿಸುವರುಎಂದು ವೆಬ್‌ ತಾಣದಲ್ಲಿ ಪ್ರಕಟಿಸಲಾಗಿದೆ.

ಸದಸ್ಯರ ಫೋಟೋ, ಮೊಬೈಲ್ ಸಂಖ್ಯೆ ಬಂತು:ನಗರಸಭೆಗೆ ಆಯ್ಕೆಯಾಗಿ ವರ್ಷ ಕಳೆದರೂ ಫೋಟೋಮತ್ತು ಮೊಬೈಲ್ ಸಂಖ್ಯೆ ಅರ್ಧಕ್ಕರ್ಧ ಸದಸ್ಯರ ಮಾಹಿತಿ ಜಾಲತಾಣದಲ್ಲಿ ಲಭ್ಯವಿರಲಿಲ್ಲ. ಈಗ ಸದಸ್ಯರ ಫೋಟೋ ಮತ್ತು ಮೊಬೈಲ್‌ ಸಂಖ್ಯೆ ಸೇರ್ಪಡೆಯಾಗಿದೆ. ಈ ಮೂಲಕ ಸಾರ್ವಜನಿಕರು ವೆಬ್‌ತಾಣದಿಂದ ಮಾಹಿತಿ ಪಡೆಯಲು ಅನುಕೂಲವಾಗಿದೆ.

ಅಲ್ಲದೆ ನಗರಸಭೆಸಿಬ್ಬಂದಿಪುಟದಲ್ಲಿಯೂ ಗಣನೀಯ ಬದಲಾವಣೆ ಮಾಡಲಾಗಿದೆ. ಅಲ್ಲಿಯೂ ಅಧಿಕಾರಿ, ಸಿಬ್ಬಂದಿಗಳ ಹೆಸರು ಸೇರ್ಪಡೆಯಾಗಿರಲಿಲ್ಲ. ಆ ಜಾಗದಲ್ಲಿ ಹೆಸರು ಮತ್ತು ಫೋಟೋ ಲಭ್ಯವಿದೆ.

ಬದಲಾಗದ ಅಧಿಕಾರಿಗಳ ಕೋಶ:ಯಾದಗಿರಿ ಜಿಲ್ಲೆಯ ವೆಬ್‌ತಾಣ (www.yadgir.nic.in)ದಲ್ಲಿ ಅಧಿಕಾರಿಗಳ ಸಂಪರ್ಕ ಕೋಶ ಮಾತ್ರ ಇನ್ನೂ ಬದಲಾವಣೆಯಾಗಿಲ್ಲ. ಅಕ್ಟೋಬರ್ 5, 2019ರಂದುಕೊನೆಯದಾಗಿ ನವೀಕರಿಸಲಾಗಿದೆ ಎಂದು ಆ ಪುಟದ ಕೆಳ ಭಾಗದಲ್ಲಿದೆ. ಆದರೆ, ಸಿಇಒ, ಡಿಡಿಪಿಐ ವರ್ಗಾವಣೆಯಾಗಿ ತಿಂಗಳು ಕಳೆಯುತ್ತಾ ಬಂದಿದೆ. ಹಳಬರ ಹೆಸರುಗಳೆ ಇಂದಿಗೂ ರಾರಾಜಿಸುತ್ತವೆ. ಅಲ್ಲದೆಕಳೆದ 5ತಿಂಗಳಲ್ಲಿಇಬ್ಬರುಡಿಎಚ್‌ಒಗಳು ಬದಲಾವಣೆಯಾಗಿದ್ದಾರೆ. ಆದರೆ, ಮೊದಲಿಗೆ ಇದ್ದ ಡಿಎಚ್‌ಒ ಹೆಸರೇ ಇಂದಿಗೂ ಸೂಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.