ADVERTISEMENT

ಸುರಪುರ | ‘ಮಾನಸಿಕ ನೆಮ್ಮದಿಗೆ ಸಂಗೀತ ದಿವ್ಯ ಔಷಧ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:53 IST
Last Updated 23 ಜೂನ್ 2025, 13:53 IST
ಸುರಪುರ ಸಮೀಪದ ರಂಗಂಪೇಟೆಯ ಸಹಜಾನಂದ ಸರಸ್ವತಿ ಮಂದಿರದಲ್ಲಿ ವಿಶ್ವ ಸಂಗೀತ ದಿನದ ಅಂಗವಾಗಿ ದಾಸವಾಣಿ ಕಾರ್ಯಕ್ರಮ ಜರುಗಿತು
ಸುರಪುರ ಸಮೀಪದ ರಂಗಂಪೇಟೆಯ ಸಹಜಾನಂದ ಸರಸ್ವತಿ ಮಂದಿರದಲ್ಲಿ ವಿಶ್ವ ಸಂಗೀತ ದಿನದ ಅಂಗವಾಗಿ ದಾಸವಾಣಿ ಕಾರ್ಯಕ್ರಮ ಜರುಗಿತು   

ಸುರಪುರ: ‘ಸಂಗೀತ ವಿಶ್ವ ವ್ಯಾಪಿ ಕಲೆಯಾಗಿದೆ. ಮಾನಸಿಕ ನೆಮ್ಮದಿಗೆ ಸಂಗೀತ ದಿವ್ಯ ಔಷಧವಾಗಿದೆ’ ಎಂದು ಆಕಾಶವಾಣಿ ಕಲಾವಿದ ಶಿವಶರಣಯ್ಯ ಬಳ್ಳುಂಡಗಿ ಮಠ ಹೇಳಿದರು.

ಸಮೀಪದ ರಂಗಂಪೇಟೆಯ ಸಹಜಾನಂದ ಸರಸ್ವತಿ ಮಂದಿರದಲ್ಲಿ ಸಂಗೀತ ಕಲಾವಿದರ ಬಳಗದಿಂದ ವಿಶ್ವ ಸಂಗೀತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನಸ್ಸಿನ ಸಂತೋಷ ಹಾಗೂ ಆರೋಗ್ಯವನ್ನು ಗಟ್ಟಿಯಾಗಿ ಹಿಡಿಯುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಕೇಳುವುದರಿಂದ ಒತ್ತಡ ನಿವಾರಣೆ ಸಾಧ್ಯ. ಭಾರತದಲ್ಲಿ ಸಂಗೀತಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮನಸ್ಸಿಗೆ ಮುದ ನೀಡಿ ಆನಂದವನ್ನುಂಟು ಮಾಡುವ ಶಕ್ತಿ ಸಂಗೀತಕ್ಕೆ ಇರುವುದರಿಂದ ಈ ಕಲೆಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು’ ಎಂದರು.

ADVERTISEMENT

ಮಂದಿರ ಸಮಿತಿ ಅಧ್ಯಕ್ಷ ಹೊನ್ನಪ್ಪ ಹಳಿಜೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಸಂಗೀತ ಕಾರ್ಯಕ್ರಮ ಜರುಗಿತು.

ಕಲಾವಿದರಾದ ಮೋಹನರಾವ ಮಾಳದಕರ್, ನರಸಿಂಹ ಬಂಡಿ, ಜಗದೀಶ ಮಾನು, ಜಗದೀಶ ಪತ್ತಾರ, ಮುರಳಿ ಅಂಬೂರೆ, ಶ್ರೀನಿವಾಸ ಹಳಿಜೋಳ, ಸಂತೋಷ ಜುಜಾರೆ, ಶರಣು ಕೊಂಗಂಡಿ, ದೀಪಿಕಾ, ಗೋಪಾಲ ಗುಳೇದ, ಪದ್ಮಾಜಾ ಶಹಾಪುರಕರ್, ಮಹಾಂತೇಶ ಶಹಾಪುರಕರ್, ಉಮೇಶ ಯಾದವ, ಶ್ರೀನಿವಾಸ ದಾಯಿಪುಲೆ ದಾಸರ ಹಾಡುಗಳನ್ನು ಹಾಡಿದರು.

ರಮೇಶ ನಾಡಗೇರ್, ಆನಂದ ನಾಯಕ, ಕೊಪ್ರೇಶ ಹಳಿಜೋಳ, ಸುನಂದಾ ವೆಂಕೋಬ, ಅರ್ಚಕ ಪಾಂಡುರಂಗ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.